ಯಶಸ್ವಿ ‘ಶಸ್ತ್ರಚಿಕಿತ್ಸೆ

bkt-7-7
Published on

ಬಾಗಲಕೋಟೆ: ವಿನಾಯಕ ನಗರದ ಅದ್ಯಾ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿ ಮಹಿಳೆಯೊಬ್ಬರ ಹೊಟ್ಟೆಯಲ್ಲಿದ್ದ 8 ಕೆಜಿ ತೂಕದ ಗಂಟನ್ನು ಯಶಸ್ವಿಯಾಗಿ ಹೊರ ತೆಗೆಯಲಾಗಿದೆ.

‘ಬಾದಾಮಿ ತಾಲ್ಲೂಕಿನ ಮಾಲಗಿ ಗ್ರಾಮದ ಗಿರಿಯವ್ವ ಎಂಬುವವರು ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿದಾಗ ಅವರ ಹೊಟ್ಟೆಯಲ್ಲಿ ಅಂಡಾಶಯ ಹಾಗೂ ಗರ್ಭ ಚೀಲದ ಅರ್ಬುದ ಗಂಟು ಇರುವುದು ಪತ್ತೆಯಾಯಿತು’ ಎಂದು ಆಸ್ಪತ್ರೆ ಮುಖ್ಯ ಶಸ್ತ್ರಚಿಕಿತ್ಸಕ ಡಾ.ರಂಗಪ್ಪ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಶಸ್ತ್ರಚಿಕಿತ್ಸೆ ಮೂಲಕ ಗಂಟನ್ನು ಹೊರತೆಗೆಯಲು ನಿರ್ಧರಿಸಲಾಯಿತು. ಮೂರು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನೆರವೇರಿಸಿ, 8 ಕೆಜಿ ತೂಕದ ಗಂಟು ಹೊರ ತೆಗೆಯಲಾಗಿದೆ’ ಎಂದಿದ್ದಾರೆ.

ಪ್ರಸೂತಿ, ಸ್ತ್ರೀರೋಗ ತಜ್ಞೆ ಡಾ.ಜ್ಯೋತಿ ಪಾಟೀಲ, ಅರವಳಿಕೆ ತಜ್ಞೆ ಡಾ.ಪ್ರತಿಮಾ ಗುಗ್ಗರಿಗೌಡರ ಶಸ್ತ್ರಚಿಕಿತ್ಸೆಗೆ ಕೈಜೋಡಿಸಿದ್ದರು ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net