ಯಶವಂತ್ ಬಾಯ್ಸ್‌ಗೆ ಪ್ರಥಮ ಬಹುಮಾನ

Volleyball
Published on

ಚಿತ್ರದುರ್ಗ: ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಚಿಕ್ಕನಕಟ್ಟೆ ಗ್ರಾಮದಲ್ಲಿ ಈಚೆಗೆ ನಡೆದ ರಾಜ್ಯಮಟ್ಟದ ಹೊನಲು-ಬೆಳಕಿನ ವಾಲಿಬಾಲ್ ಪಂದ್ಯಾವಳಿಯಲ್ಲಿ ಬೆಂಗಳೂರಿನ ಯಶವಂತ್ ಬಾಯ್ಸ್‌ ತಂಡವೂ 20 ಸಾವಿರ ರೂ. ನಗದು, ಟ್ರೋಫಿಯೊಂದಿಗೆ ಪ್ರಥಮ ಬಹುಮಾನ ಮುಡಿಗೇರಿಸಿಕೊಂಡಿತು.

ಚನ್ನಗಿರಿ ತಾಲೂಕಿನ ಕೆರೆಬಿಳಿಚು ಅಂಕು ಬಾಯ್ಸ್‌ ತಂಡ 15 ಸಾವಿರ ರೂ. ನಗದು ಪಡೆದು ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು. ಸಂತೆಬೆನ್ನೂರಿನ ಶೋಹಿಬ್ ಬಾಯ್ಸ್‌ ತಂಡ 10 ಸಾವಿರ ರೂ. ನಗದು-ತೃತೀಯ, ಚಿಕ್ಕನಕಟ್ಟೆ ಗ್ರಾಮದ ವಾಲ್ಮೀಕಿ ಬ್ರದರ್ಸ್‌ 5 ಸಾವಿರ ರೂ ನಗದು-ನಾಲ್ಕನೇ ಬಹುಮಾನ ಪಡೆದವು.

ರಾಜ್ಯದ ವಿವಿಧೆಡೆಯಿಂದ 26 ತಂಡಗಳು ಭಾಗವಹಿಸಿದ್ದವು. ಇದೇ ವೇಳೆ ಹಿರಿಯ ಆಟಗಾರರಾದ ಬಿ.ಆರ್.ತಿಮ್ಮಪ್ಪ, ಡಿ.ಎಚ್.ಮೋಹನ್‌ಕುಮಾರ್, ಎಚ್.ಶ್ರೀನಿವಾಸ್, ತುಂಬಿಕೆರೆ ಬಸವರಾಜ್, ಗುರುಮೂರ್ತಿ, ಗುಬ್ಬಿ ಶ್ರೀನಿವಾಸ್, ರವಿ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net