ಯುವಕನ ಮೇಲೆ ಹಲ್ಲೆ,ದೂರು-ಪ್ರತಿದೂರು ದಾಖಲು

crime_collage
Published on

ಚಿತ್ರದುರ್ಗ:ಅನ್ಯಕೋಮಿನ ಯುವತಿಗೆ ಡ್ರಾಫ್ ನೀಡಿದ್ದಕ್ಕೆ ಯುವತಿ ಕಡೆಯವರು ಯುವಕನ ಮೇಲೆ ಹಲ್ಲೆ ನಡೆಸಿದ ಘಟನೆ ಗುರುವಾರ ರಾತ್ರಿ ನಗರದ ಎಸ್‌ಜೆಎಂ ಸರ್ಕಲ್ ಬಳಿ ನಡೆದಿದೆ.
ನಗರದ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುವ ಚಿತ್ರದುರ್ಗ ತಾಲೂಕು ಈರಜ್ಜನಹಟ್ಟಿ ಯುವಕ,ಅದೇ ಅಂಗಡಿಯಲ್ಲಿ ಕೆಲಸ ಮಾಡುತ್ತಿ ರುವ ಅನ್ಯಕೋಮಿನ ಯುವತಿಯನ್ನು ಆಕೆ ಮನೆ ಸಮೀಪ ಕನಕ ಸರ್ಕಲ್‌ಬಳಿ ಡ್ರಾಫ್ ನೀಡುತ್ತೇನೆಂದು ಬೈಕ್ ಹತ್ತಿಸಿಕೊಂಡಿದ್ದು,ಇದನ್ನು ಗ ಮನಿಸಿದ ಕೆಲವರು ಎಸ್‌ಜೆಎಂ ಕಾಲೇಜು ಬೈಕ್ ಅಡ್ಡಗಟ್ಟಿ ಆತನ ಮೇಲೆ ಬಳಿ ಹಲ್ಲೆ ನಡೆಸಿದ್ದಾರೆ.
ಹಲ್ಲೆಗೆ ಒಳಗಾದ ಯುವಕ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು,ಪೊಲೀಸರಿಗೆ ದೂರು ನೀಡಿದ್ದಾನೆ. ಮತ್ತೊಂದೆಡೆ ಮನೆಗೆ ಡ್ರಾಫ್ ಕೊಡುತ್ತೇನೆಂದು ಹೇ ಳಿ ತನ್ನೊಂದಿಗೆ ಅಸಭ್ಯವಾಗಿ ನಡೆದುಕೊಂಡಿದ್ದಾನೆಂದು ಹೇಳಿ ಹಲ್ಲೆಗೆ ಒಳಗಾದ ಯುವಕನ ವಿರುದ್ಧ ಯುವತಿ ದೂರು ನೀಡಿದ್ದಾಳೆ. ಕೋಟೆ ಪೊ ಲೀಸರು ಯುವತಿ ದೂರು ಆಧರಿಸಿ ಹಾಗೂ ಹಲ್ಲೆಗೆ ಸಂಬಂಧಿಸಿದಂತೆ ಐವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net