

ಬಸವಕಲ್ಯಾಣ: ಗುಣತೀರ್ಥ ವಾಡಿ ಯುವತಿ ಭಾಗ್ಯಶ್ರೀ ಪಂಡಿತ ಹತ್ಯೆಗೈದವರನ್ನು ಶೀಘ್ರ ಪತ್ತೆ ಹಚ್ಚಿ ಗಲ್ಲು ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿ ಟೋಕರಿ ಕೋಲಿ ಸಮಾಜದಿಂದ ನಗರದಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಯಿತು.
ಗಾಂಧಿ ವೃತ್ತದಿಂದ ಅಂಬೇಡ್ಕರ್ ವೃತ್ತದ ಮೂಲಕ ಮುಖ್ಯ ರಸ್ತೆ ಮಾರ್ಗವಾಗಿ ವಾಲ್ಮೀಕಿ ವೃತ್ತದವರೆಗೆ ಮೆರವಣಿಗೆ ನಡೆಸಿ ಸಿಎಂಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ಶಾಂತಗೌಡ ಬಿರಾದಾರ ಅವರಿಗೆ ಸಲ್ಲಿಸಲಾಯಿತು. ಅಂಬೇಡ್ಕರ್ ವೃತ್ತದ ಬಳಿ ಕೆಲಕಾಲ ಮಾನವ ಸರಪಳಿ ರಚಿಸಿ ರಾಜ್ಯ ಸರ್ಕಾರ ಮತ್ತು ಶಾಸಕರ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.
ಯುವತಿಯನ್ನು ಅಪಹರಿಸಿ ಕೊಲೆ ಮಾಡಿದವರನ್ನು ಗಲ್ಲಿಗೇರಿಸಬೇಕು ಇಲ್ಲವೆ ಎನ್‌ಕೌಂಟರ್ ಮಾಡಬೇಕು. ಬಡ ಕುಟುಂಬಕ್ಕೆ ೫೦ ಲಕ್ಷ ರೂ. ಆರ್ಥಿಕ ನೆರವು, ಸಾಮಾಜಿಕ ಭದ್ರತೆ ನೀಡಬೇಕು. ಮಹಿಳೆಯರ ಮೇಲೆ ಆಗುತ್ತಿರುವ ಅತ್ಯಾಚಾರ, ಕಿರುಕುಳ, ಕೊಲೆ ತಪ್ಪಿಸಲು ಕಠಿಣ ಕಾನೂನು ಜಾರಿಗೊಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ನಿಜಶರಣ ಅಂಬಿಗರ ಚೌಡಯ್ಯ ಜಾಗೃತಿ ಆಶ್ರಮದ ಶ್ರೀ ರತ್ನಾಕರ ಶಿವಯೋಗಿಗಳು, ಶ್ರೀ ದತ್ತಾತ್ರಿ ಮಹಾರಾಜರು, ಟೋಕರಿ ಕೋಲಿ ಸಮಾಜದ ಜಿಲ್ಲಾಧ್ಯಕ್ಷ ಜಗನ್ನಾಥ ಜಮಾದಾರ, ತಾಲೂಕು ಅಧ್ಯಕ್ಷ ಗೋವಿಂದ ಚಾಮಲ್ಲೆ, ಕಾರ್ಯದರ್ಶಿ ರೇಖಾ ಹೊಸಮನಿ, ಮುಖಂಡರಾದ ಶಂಕರರಾವ ಜಮಾದಾರ, ವಾಲ್ಮೀಕ ಖನಕೂರೆ, ಈಶ್ವರ ಬೊಕ್ಕೆ, ಮುಜಾಹಿದ್ ಪಾಶಾ ಖುರೇಶಿ, ರಾಜು ಹೊಸಮನಿ, ಆಕಾಶ ಖಂಡಾಳೆ, ರವೀಂದ್ರ ಕೊಳಕುರೆ, ಸಂಜೀವಕುಮಾರ ಗಾಯಕವಾಡ, ಪಿಂಟು ಕಾಂಬಳೆ, ಸುನೀತಾ ಕಾಂಬಳೆ, ಪ್ರವೀಣ ಪೋಪಟ್ ರಾಜಕುಮಾರ ಎರಂಡಿಗಿ, ಪ್ರಕಾಶ ನಾಗೂರೆ ಮಾತನಾಡಿ, ಕೊಲೆ ಮಾಡಿ ಪರಾರಿಯಾದವರನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಮಾಜದ ತಾಲೂಕು ಗೌರವಾಧ್ಯಕ್ಷ ರಾಮಣ್ಣ ಮಂಠಾಳೆ, ಉಪಾಧ್ಯಕ್ಷ ಸಂಜುಕುಮಾರ ಸುಣಗಾರ, ಖಜಾಂಚಿ ರಾಜಕುಮಾರ ಹಿರಲೆ, ಚಂದ್ರಕಾಂತ ಫುಲೆ, ಪ್ರಮುಖರಾದ ದತ್ತು ಪದ್ಮೆ, ವಾಲ್ಮೀಕಿ ಮುಡಬಿ, ಮಲ್ಲಿಕಾರ್ಜುನ ಬೊಕ್ಕೆ, ನಾಗಪ್ಪ ಚಾಮಲ್ಲೆ, ಯುವರಾಜ ಭೆಂಡೆ, ಸುರೇಶ ಮೋರೆ, ಸಿಕಂದರ ಸಿಂಧೆ, ಶರಣಪ್ಪ ಪರೆಪ್ಪ, ಧನರಾಜ ರಾಜೋಳೆ, ರಾಜಕುಮಾರ, ದತ್ತು ಪಸರಕಲೆ, ದತ್ತು ಚಿಟ್ಟಂಪಳ್ಳೆ, ಭರತ ಬೊಕ್ಕೆ, ಬಳಿರಾಮ ಹಿರಲೆ, ರಾಜಕುಮಾರ ಗುಂಡೆ, ತುಕಾರಾಮ ಜೋಗೆ ಇತರರಿದ್ದರು.