

ಕಲಬುರಗಿ: ಯುವತಿಯನ್ನು ಬೆದರಿಸಿ ಹನಿಟ್ರಾÈಪ್ ಮಾಡಿ, ಅತ್ಯಾಚಾರ ಎಸಗಿದ್ದಾರೆ ಎಂದು ದಲಿತ ಸೇನೆ ಅಧ್ಯಕ್ಷ ಹಣಮಂತ ಯಳಸಂಗಿ ಸೇರಿ ಎಂಟು ಸಹಚರರ ವಿರುದ್ಧ ನಗರದ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಳಸಂಗಿ ಸಹಚರರಾದ ಪ್ರಭು ಹಿರೇಮಠ, ರಾಜು ಲೇಂಗಟಿ, ಶ್ರೀಕಾಂತ ರಡ್ಡಿ, ಮಂಜು ಭಂಡಾರಿ, ಉದಯಕುಮಾರ ಖಣಗೆ, ಅರವಿಂದ ಕಮಲಾಪುರ, ಸಂತೋಷ ಪಾಳಾ ವಿರುದ್ಧ ಪ್ರಕರಣ ದಾಖಲಾಗಿದೆ.
ಸಂತ್ರಸ್ತೆ ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಾಗಿದ್ದು, ಶುಕ್ರವಾರ ಎ-೨ ಆರೋಪಿ ರಾಜು ಲೇಂಗಟಿಯನ್ನು ಬಂಧಿಸಿದ್ದು, ಶನಿವಾರ ಮತ್ತೊಬ್ಬ ಆರೋಪಿ ಪ್ರಭು ಹಿರೇಮಠನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಏನಿದು ಪ್ರಕರಣ: ಮುಂಬೈ ಮೂಲದ ಸಂತ್ರಸ್ತೆಯನ್ನು ಕಲಬುರಗಿಗೆ ಕೆಲಸದ ಆಮಿಷ ಒಡ್ಡಿ ಕರೆದುಕೊಂಡು ಬಂದಿದು, ರಾಜು ಲೇಂಗಟಿ ಸಂತ್ರಸ್ತೆಯನ್ನು ಲಾಡ್ಜ್ನಲ್ಲಿ ಕೂಡಿ ಹಾಕಿ ಅತ್ಯಾಚಾರ ಎಸಗಿದ್ದಾನೆ. ಅಲ್ಲದೇ ಉದ್ಯಮಿಯೊಬ್ಬನ ಜತೆ ಲೈಂಗಿಕವಾಗಿ ಸಹಕರಿಸಬೇಕು, ನಮ್ಮ ಬಾಸ್ ಯಳಸಂಗಿ ಹೇಳುವಂತೆ ಕೇಳಬೇಕು ಇಲ್ಲದಿದ್ದರೆ ಖಲಾಸ್ ಮಾಡುತ್ತೇವೆ ಎಂದು ಆರೋಪಿಗಳು ಬೆದರಿಕೆ ಒಡ್ಡಿದ್ದಾರೆ. ಸಂತ್ರಸ್ತೆ ಒಪ್ಪಿಗೆ ನೀಡಿದ್ದು, ಉದ್ಯಮಿ ಜತೆ ಸಂತ್ರಸ್ತೆ ಇರುವ ವಿಡಿಯೋ, ಫೋಟೋ ಸೆರೆಹಿಡಿದಿದ್ದಾರೆ. ಸಂತ್ರಸ್ತೆಯ ಅರಿವಿಗೆ ಬಾರದೆ ಉದ್ಯಮಿಗೆ ಬ್ಲಾಕ್‌ಮೇಲ್ ಮಾಡಿ, ಒಂದು ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದು, ೩೩.೫೦ ಲಕ್ಷ ರೂ.ಗೆ ಡೀಲ್ ಕುದುರಿಸಿದ್ದಾರೆ. ಸಂತ್ರಸ್ತೆಗೆ ೭೦ ಸಾವಿರ ರೂ. ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಡೀಲ್ ನಂತರ ರಾಜು ಲೇಂಗಟಿ ಸಂತ್ರಸ್ತೆಯನ್ನು ಬೆದರಿಸಿ, ಅತ್ಯಾಚಾರ ಮಾಡಿರುತ್ತಾನೆ. ಅವಳ ವಿಡಿಯೋ, ಫೋಟೋ ವೈರಲ್ ಮಾಡುತ್ತೇವೆ ಎಂದು ಸಂತ್ರಸ್ತೆಗೆ ಬ್ಲಾಕ್‌ಮೇಲ್ ಮಾಡಿ, ೧೦ ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಾರೆ. ಆದ್ದರಿಂದ ಹಣಮಂತ ಯಳಸಂಗಿ ಸೇರಿ ಎಂಟು ಆರೋಪಿಗಳು ಜೀವ ಬೆದರಿಕೆ ಹಾಕಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ. ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.