ಯಳಂದೂರಿನಲ್ಲಿ ದಿಢೀರ್ ಮಳೆ

24 yelandur 03
Published on

ಯಳಂದೂರು: ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಮಂಗಳವಾರ ಮಧ್ಯಾಹ್ನ ಅರ್ಧ ಗಂಟೆಗೂ ಹೆಚ್ಚು ಕಾಲ ಧಾರಾಕಾರ ಮಳೆ ಸುರಿಯಿತು.


ಹವಾಮಾನ ಇಲಾಖೆಯು ಜಿಲ್ಲಾದ್ಯಂತ ವಿವಿಧೆಡೆ ಮಂಗಳವಾರ ಹಾಗೂ ಬುಧವಾರ ಮಳೆ ಬೀಳುವ ಸಂಭವವಿದೆ ಎಂದು ತಿಳಿಸಿತ್ತು. ಅದರಂತೆ ತಾಲೂಕಿನಲ್ಲಿ ಬೆಳಗ್ಗಿಯಿಂದಲೇ ಮೋಡ ಕವಿದ ವಾತಾವರಣ ಇತ್ತು. ಮಧ್ಯಾಹ್ಯದ ವೇಳೆ ಮಳೆ ಕೆಲ ಸಮಯ ಸುರಿಯಿತು.


ಸಂತೇಮರಹಳ್ಳಿಯಲ್ಲಿ ಮಳೆ ಸುರಿದಿದ್ದರಿಂದ ಮಂಗಳವಾರ ಸಂತೆಗೆ ಅಡಚಣೆಯಾಯಿತು. ವ್ಯಾಪಾರಿಗಳು ತೊಂದರೆ ಅನುಭವಿಸಿದರು. ತಾವು ತಂದಿದ್ದ ತರಕಾರಿ ಸೇರಿದಂತೆ ಇತರ ಸಾಮಗ್ರಿಗಳನ್ನು ಮಳೆಯಿಂದ ರಕ್ಷಿಸಿಕೊಳ್ಳಲು ಪರದಾಡಿದರು. ಅಂಗಡಿ ಮುಂಗಟ್ಟು ಹಾಗೂ ಸಂತೆಕಟ್ಟೆಯ ಛಾವಣಿಯಲ್ಲಿ ಮಾರಾಟಗಾರರು ಹಾಗೂ ಗ್ರಾಹಕರು ಆಶ್ರಯ ಪಡೆದಿದ್ದ ದೃಶ್ಯ ಕಂಡು ಬಂತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net