ಯಲ್ಲಮ್ಮನಗುಡ್ಡ ಪ್ಲಾಸ್ಟಿಕ್‌ಮುಕ್ತವಾಗಲಿ

WEB1
ಶ್ರೀಕ್ಷೇತ್ರ ಯಲ್ಲಮ್ಮನ ಗುಡ್ಡದಲ್ಲಿ ದೇವಿ ದರ್ಶನ ಪಡೆದ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ಅಧ್ಯಕ್ಷ ಸುಭಾಷ ಆಡಿ ದಂಪತಿಯನ್ನು ಸತ್ಕರಿಸಲಾಯಿತು. ಎಸ್‌ಪಿಬಿ ಮಹೇಶ, ಕೊಳ್ಳಪ್ಪಗೌಡ ಗಂದಿಗವಾಡ, ವೈ.ವೈ. ಕಾಳಪ್ಪನವರ ಇದ್ದಾರೆ.
Published on

ಉಗರಗೋಳ: ಕೇಂದ್ರ ಮತ್ತು ರಾಜ್ಯ ಸರ್ಕಾರ ಏಕಬಳಕೆ ಪ್ಲಾಸ್ಟಿಕ್ ಬಳಕೆ ನಿಷೇಧಿಸಿವೆ. ಯಲ್ಲಮ್ಮನಗುಡ್ಡವನ್ನು ಪ್ಲಾಸ್ಟಿಕ್ ಮುಕ್ತವಾಗಿಸಬೇಕು. ಅಂಗಡಿಗಳಲ್ಲಿ ಬಟ್ಟೆ ಚೀಲ ಮಾರಾಟ ಮಾಡಬೇಕು. ಜತೆಗೆ ದೇವಸ್ಥಾನದ ವತಿಯಿಂದಲೂ ಭಕ್ತರಿಗೆ ಬಟ್ಟೆಯ ಚೀಲ ಕೊಟ್ಟು ಜಾಗತಿ ಮೂಡಿಸುವ ಕೆಲಸವಾಗಬೇಕಿದೆ ಎಂದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಅಧ್ಯಕ್ಷ ಸುಭಾಷ ಆಡಿ ಹೇಳಿದರು.

ಸಮೀಪದ ಯಲ್ಲಮ್ಮನಗುಡ್ಡಕ್ಕೆ ಭಾನುವಾರ ಕುಟುಂಬ ಸಮೇತ ಭೇಟಿ ನೀಡಿ ಶ್ರೀ ಯಲ್ಲಮ್ಮದೇವಿ ದರ್ಶನ ಪಡೆದು, ದೇವಸ್ಥಾನ ವತಿಯಿಂದ ಸನ್ಮಾನ ಸ್ವೀಕರಿ ಅವರು ಮಾತನಾಡಿದರು. ವಿವಿಧ ದೇವಸ್ಥಾನ, ಸರ್ಕಾರಿ ಶಾಲೆಗಳು, ಕಚೇರಿಗಳು ಸೇರಿ ಸಾರ್ವಜನಿಕ ಸ್ಥಳಗಳಲ್ಲಿ ಪ್ಲಾಸ್ಟಿಕ್ ಬಳಸದಂತೆ ಜಾಗತಿ ಮೂಡಿಸುತ್ತಿದ್ದೇವೆ. ಪ್ಲಾಸ್ಟಿಕ್‌ಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದರು.

ಸುಧಾ ಸುಭಾಸ ಆಡಿ, ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಸಯ್ಯ ಹಿರೇಮಠ, ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ಎಸ್‌ಪಿಬಿ ಮಹೇಶ, ಸಮಿತಿ ಸದಸ್ಯರಾದ ಕೊಳ್ಳಪ್ಪಗೌಡ ಗಂದಿಗವಾಡ, ವೈ.ವೈ. ಕಾಳಪ್ಪನವರ, ಎಂ.ವಿ. ಮೂಳ್ಳೂರ, ಅಲ್ಲಮಪ್ರಭು ಪ್ರಭುನವರ, ಆರ್.ಎಸ್. ಸವದತ್ತಿ, ಪ್ರಭು ಹಂಜಗಿ, ಡಿ.ಆರ್. ಚವ್ಹಾಣ, ಸದಾನಂದ ಈಟಿ, ಏಕನಗೌಡ ಮುದ್ದನಗೌಡ್ರ, ಗಣಪತಿಗೌಡ ಚನ್ನಪ್ಪಗೌಡ್ರ, ಪಂಡಿತ ಪಿ. ರಾಜಶೇಖರಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net