

ಚಿತ್ರದುರ್ಗ: ಶಕ್ತಿ ದೇವತೆ ರಾಜಉತ್ಸವಾಂಬ ಉಚ್ಚಂಗಿ ಯಲ್ಲಮ್ಮ ದೇವಿಗೆ ಬೆಳ್ಳಿ ಹೊಸ ಮುಖಪದ್ಮ ಸೇರಿ ನಾನಾ ಬೆಳ್ಳಿ ಆಭರಣಗಳನ್ನು ಮಾಡಿಸಲು ಭಾನು ವಾರ ದೊಡ್ಡಪೇಟೆ ರಾಜ ಉತ್ಸವಾಂಬ ಉಚ್ಚಂಗಿ ಯಲ್ಲಮ್ಮ ದೇವಾಲಯದಲ್ಲಿ ನಡೆದ ಮುಖಂಡರ ಹಾಗೂ ಭಕ್ತರ ಸಭೆ ತೀರ್ಮಾನಿಸಿತು.
ದೇವಿಗೆ ಬೆಳ್ಳಿ ಮುಖಪದ್ಮ,ಕಿರೀಟ,ಬೆಳ್ಳಿ ಕತ್ತಿ,ಛತ್ರಿ,ಸೊಂಟದ ಪಟ್ಟಿ ಹಾಗೂ ಸರ್ಪವನ್ನು ಹೊಸದಾಗಿ ಮಾಡಿಸಲು ನಿರ್ಧರಿಸಲಾಯಿತು. ಈಗಿರುವ ಮುಖಪದ್ಮ,ಕಿರೀಟ,ಸೊಂಟದ ಪಟ್ಟಿ ಮತ್ತಿತರ ಅಂದಾಜು 2 ಕೆ.ಜಿ.ಅಭರಣಗಳು ಹಳೆಯದಾಗಿದ್ದು, ಹೊಸದಾಗಿ ಮೂರ‌್ನಾಲ್ಕು ಕೆ.ಜಿ.ಬೆಳ್ಳಿ ದೇಣಿಗೆ ಪಡೆದು ಜಾತ್ರೆವೊಳಗೆ ಆಭರಣಗಳನ್ನು ಮಾಡಿಸುವ ಕುರಿತು ಚರ್ಚಿಸಲಾಯಿತು. ಭಕ್ತರು ಸ್ಥಳದಲ್ಲೇ 2.80 ಲಕ್ಷ ರೂ. ದೇಣಿಗೆ ವಾಗ್ದಾನ ನೀಡಿದರು. ಯುಗಾದಿ ಹಬ್ಬದ ಬಳಿಕ ಆಭರಣಗಳನ್ನು ಮಾಡಿಸಲಾಗುವುದು ಎಂದು ಮುಖಂಡರು ತಿಳಿಸಿದ್ದಾರೆ.
14 ರಿಂದ 28ರವರೆಗೆ ಜಾತ್ರೆ
ದೇವಿಯ ಜಾತ್ರಾ ಮಹೋತ್ಸವ ಮೇ14ರಿಂದ28ರವರೆಗೆ ನಡೆಯಲಿದೆ. 14 ರಂದು ಸಾರು ಹಾಕುವುದು,18ರಂದು ಬೆಳಗ್ಗೆ ಕಂಕಣಧಾರಣೆ, ರಾತ್ರಿ ಹೂವಿನ ಅಲಂಕಾರದೊಂದಿಗೆ ಸಿಂಹೋತ್ಸವ, 19ರಂದು ಸರ್ಪೋತ್ಸವ,20ರಂದು ನವಿಲೋತ್ಸವ ಜರುಗಲಿವೆ. 22ರಂದು ದೇವಿಪುರ ಪ್ರ ವೇಶ,24ರಂದು ನಾನಾ ಜನಪದ ಕಲಾಮೇಳಗಳೊಂದಿಗೆ ನಗರದ ರಾಜಬೀದಿಗಳಲ್ಲಿ ಅದ್ದೂರಿ ಮೆರವಣಿಗೆ ನಡೆಯಲಿದೆ. 25ರಂದು ಸಿಡಿ ಉತ್ಸವ ಜರುಗಲಿದೆ. 26ರಂದು ಭಕ್ತರಿಂದ ಓಕಳಿ ಕಾರ್ಯಕ್ರಮ ಹಾಗೂ 28ರಂದು ಕಂಕಣ ವಿಸರ್ಜನೆಯೊಂದಿಗೆ ಜಾತ್ರೆ ಸಂಪನ್ನಗೊಳ್ಳಲಿದೆ.
ಚಂದ್ರಶೇಖರ್,ಆರ್.ಮಂಜುನಾಥ್,ಪರಮೇಶ್,ಸುರೇಶ್‌ಉಗ್ರಾಣ,ರಮೇಶ್,ವೀರೇಶ್,ಜಯಣ್ಣ,ಬಾಗೋ ಡಿಸ್ವಾಮಿ, ರಾಘವೇಂದ್ರ,ಕುಮಾರ,ರಾಜೇಶ್
--