ಯಲಬುರ್ಗಾ ತಾಲೂಕಿನ ವಿವಿಧೆಡೆ ಬಿರುಗಾಳಿ ಸಹಿತ ಮಳೆ

rain fire
ಚೌಡಾಪುರ ಗ್ರಾಮದಲ್ಲಿ ಸಿಡಿಲು ಬಡಿದು ಬಣವೆಗೆ ಬಿದ್ದ ಬೆಂಕಿ ನಂದಿಸಿದ ಕುಷ್ಟಗಿ ಅಗ್ನಿಶಾಮಕ ಠಾಣೆ ಸಿಬ್ಬಂದಿ.
Published on

ಯಲಬುರ್ಗಾ: ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಗುರುವಾರ ಬಿರುಗಾಳಿ ಸಹಿತ ಮಳೆಯಾಗಿದೆ. ತಾಲೂಕಿನ ಬೀರಲದಿನ್ನಿ, ಎನ್.ಜರಕುಂಟಿ, ಬುಡಜುಂಟಿಯಲ್ಲಿ ಮನೆಗಳು, ಕುಡಿವ ನೀರಿನ ಘಟಕದ ಶೀಟ್‌ಗಳು ಕಿತ್ತು ಹೋಗಿವೆ. ಗಿಡಮರಗಳು ಗಾಳಿಯ ರಭಸಕ್ಕೆ ನೆಲಕ್ಕುರುಳಿವೆ.

ಅಗ್ನಿಶಾಮಕ ದಳದವರು ಬೆಂಕಿ ನಂದಿಸಿದ್ದಾರೆ

ಜಾನುವಾರುಗಳಿಗೆ ಸಂಗ್ರಹಿಸಿಟ್ಟ ಹೊಟ್ಡು, ಮೇವು ಹಾಳಾಗಿದೆ. ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗಿತ್ತು. ಜನಜೀವನ ಅಸ್ತವ್ಯಸ್ತವಾಗಿತ್ತು. ಚೌಡಾಪುರದಲ್ಲಿ ರೈತ ಹನುಮಂತ ಮೈಲಾರಪ್ಪ ಛತ್ರಗುಡಿ ಅವರ ಮೇವಿನ ಬಣವೆ ಸಿಡಿಲು ಬಡಿದು ಬೆಂಕಿ ಹೊತ್ತಿ ಉರಿದಿದೆ. ಸ್ಥಳಕ್ಕೆ ಕುಷ್ಟಗಿ ಅಗ್ನಿಶಾಮಕ ದಳದವರು ಧಾವಿಸಿ ಬೆಂಕಿ ನಂದಿಸಿದ್ದಾರೆ. ಅಗ್ನಿಶಾಮಕ ಅಧಿಕಾರಿ ಸುರೇಶ, ಸಿಬ್ಬಂದಿ ಯಲ್ಲಪ್ಪ, ದೊಡ್ಡಬಸಪ್ಪ, ಅಶೋಕ, ವಿಶಾಲ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net