ಯಲಗೂರೇಶನ ಕಾರ್ತಿಕೋತ್ಸವ 15, 16ರಂದು

Published on

ಹುಬ್ಬಳ್ಳಿ: ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಪ್ರಸಿದ್ಧಿ ಯಲಗೂರ ಕ್ಷೇತ್ರದ ಶ್ರೀ ಯಲಗೂರೇಶನ ಕಾರ್ತಿಕೋತ್ಸವ ಕಾರ್ಯಕ್ರಮ ಫೆ. 15 ಹಾಗೂ 16ರಂದು ಜರುಗಲಿದೆ.

15ರಂದು ಬೆಳಗ್ಗೆ ಪಂಚಾಮೃತ ಅಭಿಷೇಕ, ಪವಮಾನ ಹೋಮ, ಮಹಾಪೂಜೆ, 10 ಗಂಟೆಗೆ ದಿಂಡಿನ ಸ್ಪರ್ಧೆ, ಹರಿದಾಸರ ಕೀರ್ತನೆ, 11.30ಕ್ಕೆ ದೇವಸ್ಥಾನದ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ, ಬಳಿಕ ಸಂಗೀತ ಕಾರ್ಯಕ್ರಮ ಹಾಗೂ ರಾತ್ರಿ ಕಾರ್ತಿಕೋತ್ಸವ ನಡೆಯಲಿದೆ.

16ರಂದು ಸಂಜೆ 6 ಗಂಟೆಗೆ ರಥೋತ್ಸವ, ಪ್ರಸಾದ ವಿತರಣೆ, ರಾತ್ರಿ 8 ಗಂಟೆಗೆ ಹೊಂಡ ಪೂಜೆ, ಪಂ. ನಾರಾಯಣ ಹಿರೇಕೊಳಚಿ ಅವರಿಂದ ವಾಯಲಿನ್, ಅಂತಾರಾಷ್ಟ್ರೀಯ ಕಲಾವಿದ ಚಿದಾನಂದ ಕುಲಕರ್ಣಿ ಅವರಿಂದ ನೃತ್ಯ ರೂಪಕ, ಪಂ. ಕುಮಾರ ಮರಡೂರ, ಪಂ. ಜಯತೀರ್ಥ ಮೇವುಂಡಿ ಹಾಗೂ ವಿದುಷಿ ಸಂಗೀತಾ ಕಟ್ಟಿ ಕುಲಕರ್ಣಿ ಅವರಿಂದ ಗಾಯನ ಏರ್ಪಡಿಸಲಾಗಿದೆ. ಪಂ. ರಾಜೇಂದ್ರ ನಾಕೋಡ ತಬಲಾ ಸೋಲೋ ಪ್ರದರ್ಶನ ನೀಡುವರು ಎಂದು ಶ್ರೀ ಯಲಗೂರೇಶ್ವರ ದೇವಸ್ಥಾನ ಕಮಿಟಿ ಅಧ್ಯಕ್ಷ ಅನಂತ ಓಂಕಾರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net