

ಯಳಂದೂರು: ತಾಲೂಕಿನ ಯರಿಯೂರು ಗ್ರಾಮದ ನಿವಾಸಿ ಕೃಷ್ಣ (35) ಎಂಬುವವರು ಅ.3 ರಂದು ನಾಪತ್ತೆಯಾಗಿದ್ದಾರೆ.
ಗಾರೆ ಕೆಲಸಕ್ಕೆ ಹೋದವರು ವಾಪಸ್ ಮನೆಗೆ ಬಂದಿಲ್ಲ. ಅವರ ಜತೆ ಕೆಲಸಕ್ಕೆ ತೆರಳಿದ್ದವರಿಗೂ ಮಾಹಿತಿ ನೀಡಿದ್ದು, ಅಂದಿನಿಂದ ಈ ದಿನದವರೆಗೂ ಕೃಷ್ಣ ಪತ್ತೆಯಾಗಿಲ್ಲ. ಮಗನನ್ನು ಪತ್ತೆ ಮಾಡಿಕೊಡಿ ಎಂದು ಕೃಷ್ಣನ ತಾಯಿ ಲಕ್ಷ ್ಮಮ್ಮ ಯಳಂದೂರು ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ. ಚಹರೆ: ಸಾಧಾರಣ ಮೈಕಟ್ಟು, 5.6 ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ, ಕಪ್ಪು ತಲೆಕೂದಲು, ಮನೆಯಿಂದ ಹೋಗುವಾಗ ಬಿಳಿ ಕಪ್ಪು ಬಣ್ಣದ ಮಿಶ್ರಿತ ಶರ್ಟ್, ನೀಲಿ ಬಣ್ಣದ ಲುಂಗಿ ಧರಿಸಿರುತ್ತಾರೆ. ಈ ವ್ಯಕ್ತಿಯು ಕಂಡುಬಂದಲ್ಲಿ ಯಳಂದೂರು ಪೋಲೀಸ್ ಠಾಣೆ 08226-240028.9480804649, 08226-222383 ಮಾಹಿತಿ ನೀಡಲು ಪ್ರಕಟಣೆ ತಿಳಿಸಿದೆ.