ಯರಗುಪ್ಪಿಯಲ್ಲಿ ಬಿತ್ತನೆ ಬೀಜ ಪೂರೈಕೆ

2Kdl1
Published on

ಕುಂದಗೋಳ: ತಾಲೂಕಿನ ಯರಗುಪ್ಪಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ರೈತರಿಗೆ ಬಿತ್ತನೆ ಬೀಜಗಳನ್ನು ಶಾಸಕಿ ಕುಸುಮಾವತಿ ಶಿವಳ್ಳಿ ಮಂಗಳವಾರ ವಿತರಿಸಿದರು. ಮುಂಗಾರು ಮಳೆ ಆರಂಭವಾಗಿದ್ದು, ರೈತರು ತಮ್ಮ ಹೊಲಗಳನ್ನು ಹಸನಾಗಿಸಿಕೊಂಡು ಬಿತ್ತನೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರದಿಂದ ರೈತರ ಅನುಕೂಲಕ್ಕಾಗಿ 10 ಕ್ವಿಂಟಾಲ್ ಹೆಸರು, 51 ಕ್ವಿಂಟಾಲ್ ಶೇಂಗಾ ಬೀಜಗಳನ್ನು ವಿತರಿಸಲಾಗುತ್ತಿದೆ. ಕ್ಷೇತ್ರಕ್ಕೆ ಮತ್ತೆ ಬೀಜಗಳನ್ನು ಪೂರೈಸಲಾಗುವುದು. ರೈತರು ಇದರ ಉಪಯೋಗ ಪಡೆಯಬೇಕು ಎಂದು ಶಾಸಕಿ ಕುಸುಮಾವತಿ ಶಿವಳ್ಳಿ ಹೇಳಿದರು. ಕಾಂಗ್ರೆಸ್ ಮುಖಂಡರಾದ ಅಡಿವೆಪ್ಪ ಶಿವಳ್ಳಿ, ಬಾಬಣ್ಣ ಬೆಟಗೇರಿ, ತಾಪಂ ಸದಸ್ಯ ವೀರಭದ್ರಪ್ಪ ಕಲಹಾಳ, ಸಂಘದ ಅಧ್ಯಕ್ಷ ಶಂಕರಗೌಡ ಪಾಟೀಲ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಿರಿಜಮ್ಮ ಅಂದೆಮ್ಮನವರ, ವೀರಭದ್ರಪ್ಪ ಗೋಣಿ, ಚನ್ನಪ್ಪ ಶಲವಡಿ, ಸೋಮಪ್ಪ ಚಲ್ಲಪ್ಪನವರ, ಸಹಕಾರಿ ಸಂಘದ ವ್ಯವಸ್ಥಾಪಕರಾದ ಪಿ.ಎಸ್. ಮಹಾಂತವಡೆಯವರ, ಈರಣ್ಣ ತಬ್ಬಣ್ಣವರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net