ಯರಗಟ್ಟಿ ಸಮಗ್ರ ಅಭಿವೃದ್ಧಿಗೆ ಬದ್ಧ

15YARAGATTI1
filter: 0; fileterIntensity: 0.0; filterMask: 0; captureOrientation: 0; module: photo; hw-remosaic: false; touch: (-1.0, -1.0); modeInfo: ; sceneMode: 8; cct_value: 5617; AI_Scene: (-1, -1); aec_lux: 110.0; aec_lux_index: 0; hist255: 0.0; hist252~255: 0.0; hist0~15: 0.0; albedo: ; confidence: ; motionLevel: 0; weatherinfo: null; temperature: 40;
Published on

 ಯರಗಟ್ಟಿ: ಅಮತ ಯೋಜನೆಯಡಿ ಪಟ್ಟಣಕ್ಕೆ ನಿರಂತರ ಕುಡಿಯುವ ನೀರು ಸರಬರಾಜು ಮಾಡುವ ಉದ್ದೇಶದಿಂದ 29 ಕೋಟಿ ರೂ. ಮೊತ್ತದ ಯೋಜನೆ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಇನ್ನೂ 18 ಕೋಟಿ ರೂ. ಕೊರತೆಯಿದ್ದು, ಮುಂಬರುವ ದಿನಗಳಲ್ಲಿ ಸರಿಪಡಿಸಲಾಗುವುದು ಎಂದು ಶಾಸಕ ವಿಶ್ವಾಸ ವೆದ್ಯ ಹೇಳಿದರು.

ಪಟ್ಟಣದ ಎಂಜಿ ರಸ್ತೆಯಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಪಟ್ಟಣ ಪಂಚಾಯಿತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ನಿರಂತರ ಕುಡಿಯುವ ನೀರು ಯೋಜನೆ ಕಾಮಗಾರಿಗೆ ಚಾಲನೆ ಮಾತನಾಡಿದ ಅವರು, ಬೆಳೆಯುತ್ತಿರುವ ಯರಗಟ್ಟಿ ಪಟ್ಟಣ ಸೌಂದಯೀರ್ಕರಣಗೊಳಿಸಲು ನಾಲ್ಕು ರಸ್ತೆಗೆ ವಿದ್ಯುತ್​ ದೀಪ ಅಳವಡಿಸಲಾಗುವುದು. ಇಲ್ಲಿನ ಸರ್ಕಾರಿ ಆಸ್ಪತ್ರೆಯನ್ನು ತಾಲೂಕು ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಿ ಅತ್ಯುತ್ತಮವಾಗಿಸುವ ಕನಸು ನನ್ನದು. ತಾಲೂಕು ಕಚೇರಿಗಳನ್ನು ಹಂತ ಹಂತವಾಗಿ ತರಲಾಗುವುದು. ಯರಗಟ್ಟಿ ಪಟ್ಟಣದ ಸ್ಮಶಾನ ಅಭಿವೃದ್ಧಿಗೆ 1.50 ಕೋಟಿ ರೂ. ಮಂಜೂರಾದ ಮೇಲೆ ಕೆಲಸ ಪ್ರಾರಂಭಿಸಲಾಗುವುದು. ಹಾಳಾಗಿರುವ ತೋಟಪಟ್ಟಿ ರಸ್ತೆಗಳು ಮುಂಬರುವ ದಿನಗಳಲ್ಲಿ ದುರಸ್ತಿ ಮಾಡಲಾಗುವುದು ಎಂದರು.

ತಾಲೂಕು ದಂಡಾಧಿಕಾರಿ ಎಂ.ವಿ. ಗುಂಡಪ್ಪಗೋಳ, ಎಪಿಎಂಸಿ ಅಧ್ಯ ನೀಲಕಂಠ ಸಿದ್ದಬಸನ್ನವರ, ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಶಂಕರ ಇಟ್ನಾಳ, ಯುವ ಮುಖಂಡ ಪಂಕಜ ದೇಸಾಯಿ, ಪಪಂ ಸದಸ್ಯರಾದ ನಿಖಿಲ ಪಾಟೀಲ, ಸಲೀಂ ಜಮಾದಾರ, ಹನಮಂತ ಹಾರುಗೊಪ್ಪ, ಲಕ್ಕಪ್ಪ ಸನ್ನಿಂಗನವರ, ವಿಠ್ಠಲ ದೇವರಡ್ಡಿ, ರಮೇಶ ದೇವರಡ್ಡಿ, ಶಿವಾನಂದ ಕರಿಗನ್ನವರ, ಭಾಸ್ಕರ ಹಿರೇಮೇತ್ರಿ, ಎಸ್​.ಎಸ್​. ಕುರಬಗಟ್ಟಿಮಠ, ಮಂಜುನಾಥ ತಡಸಲೂರ, ಬಸವರಾಜ ಚನ್ನಮೇತ್ರಿ, ಡಿ.ಕೆ. ರಫೀಕ್​, ರತ್ನಕರ ಶೆಟ್ಟಿ, ರಮೇಶ ಪಾಟೀಲ, ಕೀರಪ್ಪ ಖಿಲಾರಿ, ಅಭಿದಬೇಗ ಜಮಾದಾರ, ಪಪಂ ಸಿಬ್ಬಂದಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net