ಯತ್ನಾಳ್ ಸಾಕ್ಷಿ ಕೊಟ್ಟರೆ ತನಿಖೆಗೆ ಸಿದ್ಧ: ಸಚಿವ ಡಾ.ಎಚ್.ಸಿ. ಮಹದೇವಪ್ಪ

mysore
Published on

ಮೈಸೂರು: ಸಿಎಂ ಸ್ಥಾನಕ್ಕಾಗಿ ಬಿಜೆಪಿಯಲ್ಲಿ ಸಾವಿರಾರು ಕೋಟಿ ರೂ. ವಹಿವಾಟಾಗಿತ್ತು ಎಂದಿರುವ ಆ ಪಕ್ಷದ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ಈ ಕುರಿತು ಸಾಕ್ಷಿ ಕೊಟ್ಟರೆ ನಾವು ಅದನ್ನು ತನಿಖೆ ಮಾಡಿಸಲು ಸಿದ್ಧ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ತಿಳಿದರು.

ತಮ್ಮ ಹೇಳಿಕೆಯನ್ನು ರುಜುವಾತು ಪಡಿಸಲು ಯತ್ನಾಳ ಅವರಿಂದ ಮಾತ್ರ ಸಾಧ್ಯ. ಅವರು ಮೊದಲು ಸಾಕ್ಷಿ ಕೊಡಲಿ. ಆ ನಂತರ ಯಾವ ಸಂಸ್ಥೆಯಿಂದ ತನಿಖೆ ಮಾಡಬೇಕು ಎಂಬುದನ್ನು ತೀರ್ಮಾನಿಸಲಾಗುವುದು ಎಂದು ನಗರದಲ್ಲಿ ಭಾನುವಾರ ಸುದ್ದಿಗಾರರಿಗೆ ತಿಳಿಸಿದರು.

ಒಕ್ಕಲಿಗರ ಮಠದ ಶ್ರೀ ಕುಮಾರಚಂದ್ರಶೇಖರನಾಥ ಸ್ವಾಮೀಜಿ ವಿರುದ್ಧ ಕೇಸ್ ಹಾಕಿರುವ ವಿಚಾರದ ಕುರಿತು ಪ್ರತಿಕ್ರಿಯಿಸಿ, ಈ ನೆಲದಲ್ಲಿ ಕಾನೂನು ಎಲ್ಲರಿಗೂ ಒಂದೇ. ಅವರಿಗೊಂದು, ಇವರಿಗೊಂದು ಕಾನೂನಿಲ್ಲ.

ಕಾನೂನಿನಡಿ ಯಾವುದು ತಪ್ಪಾಗಿರುತ್ತದೆ ಅದರ ಪ್ರಕಾರ ಕ್ರಮ ಆಗುತ್ತದೆ. ಈ ವಿಚಾರದಲ್ಲಿ ರಾಜಕೀಯದ ಪ್ರಶ್ನೆ ಬರಲ್ಲ ಎಂದು ಸ್ಪಷ್ಟನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net