

ಚಿತ್ರದುರ್ಗ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಅನಂತ್‌ಕುಮಾರ್ ಸೇರಿ ಹಲವರು ಪಕ್ಷ ಕಟ್ಟಿದ್ದಾರೆ. ಅವರಿಲ್ಲದಿದ್ದರೆ, ವೇದಿಕೆ ಕಟ್ಟಲು ಕೆಲವರಿಗೆ ಯೋಗ್ಯತೆ ಇರುತ್ತಿರಲಿಲ್ಲ ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಗುಡುಗಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಯತ್ನಾಳ್ ಅವರು ಏನು ಮಾತನಾಡ್ತಾರೆ, ಆ ಭಗವಂತನಿಗೆ ಗೊತ್ತು. ಯಡಿಯೂರಪ್ಪ 3-4 ದಶಕದಿಂದ ರಾಜ್ಯದಲ್ಲಿ ರೈತಪರ ಧ್ವನಿ ಎತ್ತಿದ ರೈತ ನಾಯಕ. ಅವರ ಕೊಡುಗೆ ಏನೆಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಮನ ಬಂದಂತೆ ಹೇಳಿಕೆ ನೀಡುವುದನ್ನು ಇನ್ನಾದರೂ ನಿಲ್ಲಿಸಲಿ ಎಂದರು.