

ಹಲಗೂರು: ಸಮೀಪದ ಯತ್ತಂಬಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಮುಂದಿನ ಐದು ವರ್ಷಗಳ ಅವಧಿಯ ಆಡಳಿತ ಮಂಡಳಿ ಸ್ಥಾನಗಳಿಗೆ ಭಾನುವಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚುನಾವಣೆ ನಡೆಯಿತು.
ಸಾಮಾನ್ಯ ಕ್ಷೇತ್ರದಿಂದ ದಿನೇಶ್, ವೆಂಕಟೇಶ್, ಧರ್ಮೇಶ್, ಸಿದ್ದೇಗೌಡ, ರಾಜೇಶ್, ತಿಮ್ಮೇಗೌಡ, ಗೋವಿಂದೇಗೌಡ, ಮಹಿಳಾ ಮೀಸಲು ಕ್ಷೇತ್ರದಿಂದ ಸುಧಾ, ಜಯಮ್ಮ, ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಸುಧಾ ಕಾಳರಾಜು, ಪ್ರವರ್ಗ ಬಿ ಕ್ಷೇತ್ರದಿಂದ ಜಯರಾಮು ಜಯ ಸಾಧಿಸಿದರು. ಪ್ರವರ್ಗ ಎ ಕ್ಷೇತ್ರದಿಂದ ಚೆನ್ನಮ್ಮ ಸಿದ್ಧಾರೂಢ ಅವಿರೋಧವಾಗಿ ಅಯ್ಕೆಯಾಗಿದ್ದರು.
ಸಹಕಾರ ಇಲಾಖೆ ಅಭಿವೃದ್ಧಿ ಅಧಿಕಾರಿ ರಾಮಕೃಷ್ಣ, ಜಿ.ವಿ.ಮುತ್ತುರಾಜು ಚುನಾವಣಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.
ಗ್ರಾಮ ಪಂಚಾಯಿತಿ ಸದಸ್ಯರಾದ ಅಶೋಕ್, ಮುಖಂಡರಾದ ಪುಟ್ಟಯ್ಯ, ಪುಟ್ಟಸ್ವಾಮಿ, ನಿಂಗರಾಜು, ಬೊಕಳೇಗೌಡ, ಕೆ.ಕೆಂಪರಾಜು, ಟಿ.ರಾಜಣ್ಣ, ಚಿಕ್ಕಮರಿಗೌಡ, ಟಿ.ಕೃಷ್ಣ, ಜಿ.ಕೆಂಪರಾಜು, ಎಚ್.ಗೋಪಾಲ್ ಇತರರು ಇದ್ದರು.