ಯಾಂತ್ರಿಕ ಅಧ್ಯಯನ ಫಲ ನೀಡದು

K HALLI SAMVADA 18
Published on

ಕೊಂಡ್ಲಹಳ್ಳಿ: ಯಾಂತ್ರಿಕ ಅಧ್ಯಯನ ಫಲ ನೀಡದು. ಬದಲಿಗೆ ಆಸಕ್ತಿ ಓದು ಸಾಧನೆಗೆ ರಹದಾರಿ ಆಗಲಿದೆ ಎಂದು ಪ್ರೊ.ಎಂ.ಆರ್.ನಾಗರಾಜ್ ಹೇಳಿದರು.

ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಉತ್ತಮ ಅಂಕ ಜತೆಗೆ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಲು ವಿಷಯವನ್ನು ಪ್ರಶ್ನಾತೀತವಾಗಿ ಅಧ್ಯಯನ ಮಾಡಿ ಸಂಪೂರ್ಣ ಜ್ಞಾನ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಸ್ಪರ್ಧಾತ್ಮಕ ಜಗತ್ತಿನಲ್ಲಿ ತಂತ್ರಜ್ಞಾನ ಆಧಾರಿತ ಉದ್ಯೋಗಗಳಲ್ಲಿ ನಮ್ಮ ಸಿದ್ಧತೆಗಳು ಪರಿಪೂರ್ಣವಾಗಿರಬೇಕು. ದೈನಂದಿನ ಜೀವನದಲ್ಲಿ ಎದುರಾಗುವ ಘಟನೆಗಳಿಗೆ ವೈಜ್ಞಾನಿಕ ಕಾರಣ ಹಾಗೂ ಪರಿಹಾರ ಕಂಡುಕೊಳ್ಳುವ ಬುದ್ಧಿವಂತಿಕೆ ಬೆಳೆಸಿಕೊಳ್ಳಬೇಕು ಎಂದರು.

ಕಾಲೇಜ್ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಟಿ.ರೇವಣ್ಣ, ಉಪನ್ಯಾಸಕರಾದ ಪಿ.ಎ.ಸಣ್ಣಪಾಲಯ್ಯ, ಎಸ್.ಟಿ.ನಟರಾಜ್, ಎ.ವಿ ಶೋಭಾ, ಕೆ.ಯಶೋದಾ, ಎಸ್.ಸಿ.ನಂದಿನಿ, ಎಂ.ವಿನೋದ್‌ರಾವ್, ಬಿ.ಎಚ್.ಶಾರದಾ, ಎಸ್.ಕೆ.ವೀಣಾ, ಆರ್.ನಾಗರಾಜ್, ಟಿ.ಜಿ.ಧನಂಜಯ್, ಟಿ.ಈಶ್ವರಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net