

ಯಡ್ರಾಮಿ: ಕುಕನೂರಿನ ಶ್ರೀ ಚನ್ನಮಲ್ಲೇಶ್ವರ ಶಾಲೆಯಲ್ಲಿ ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣೆಯ ಪಿಎಸ್ಐ ಭಗವಂತ್ರಾಯಗೌಡ ಪಾಟೀಲ್ ಅವರ ಜನ್ಮದಿನ ಶನಿವಾರ ಆಚರಿಸಲಾಯಿತು.
ಭಗವಂತ್ರಾಯಗೌಡ ಪಾಟೀಲ್ ಅವರು ದಕ್ಷ ಪೊಲೀಸ್ ಅಧಿಕಾರಿಯಾಗಿದ್ದು, ಮುಖ್ಯಮಂತ್ರಿಗಳ ಪದಕ ಪಡೆದಿದ್ದಾರೆ. ಅಲ್ಲದೆ ಸಾಕಷ್ಟು ಕೇಸ್ಗಳ ವಿಚಾರಣೆ ನಡೆಸಿ, ಆರೋಪಿಗಳನ್ನು ಜೈಲಿಗಟ್ಟಿದ್ದಾರೆ. ಯುವಕರ ಬಳಗದಿಂದ ಕುಕನೂರಿನ ಶಾಲೆಯಲ್ಲಿ ಜನ್ಮದಿನ ಆಚರಿಸಲಾಯಿತು.
ವಿದ್ಯಾರ್ಥಿಗಳೊಂದಿಗೆ ಕೇಕ್ ಕತ್ತರಿಸಿ ಬರ್ತಡೇ ನಡೆಸಲಾಯಿತು. ಬಳಿಕ ಮಕ್ಕಳಿಗೆ ನೋಟ್ಬುಕ್ ಹಾಗೂ ಉಪಾಹಾರ ವಿತರಣೆ ಮಾಡಲಾಯಿತು. ಬಳಗದ ಶರಣಕುಮಾರ ಕುಕನೂರ, ಸಾಹೇಬಗೌಡ ಪಾಟೀಲ್, ಬಾಪುಗೌಡ ಪಾಟೀಲ, ಶರಣಗೌಡ ಪಾಟೀಲ, ಸುರೇಶ ಪಾಟೀಲ ನೇದಲಗಿ, ಮಲ್ಲು ಬಿರಾದಾರ, ಸಿದ್ರಾಮಯ್ಯ ಹಿರೇಮಠ, ಭಗವಂತ್ರಾಯಗೌಡ ಮಾಲಿಪಾಟೀಲ, ಮಲ್ಲಯ್ಯ ಹಿರೇಮಠ, ವಿಶ್ವನಾಥ ಅವಟಿ, ಸಿದ್ದು ಕೆರೂರ್ ಇತರರಿದ್ದರು.