ಯಡ್ರಾಮಿಗೆ ವಿವಿಧೆಡೆಯಿಂದ ಬಸ್ ಸೌಕರ್ಯ

PH 05
Published on

ಯಡ್ರಾಮಿ: ಜಿಲ್ಲಾ ಕೇಂದ್ರ ಕಲಬುರಗಿ ಸೇರಿ ವಿವಿಧ ಪ್ರಮುಖ ನಗರಗಳಿಂದ ಯಡ್ರಾಮಿಗೆ ಬಸ್ ಸೌಕರ್ಯ ಕಲ್ಪಿಸಿದ್ದು, ಸಾರ್ವಜನಿಕರು ಲಾಭ ಪಡೆದುಕೊಳ್ಳಬೇಕು ಎಂದು ಘಟಕದ ನಿಯಂತ್ರಣಾಧಿಕಾರಿ ಹಣಮಂತ ಕಾಚಾಪುರ ತಿಳಿಸಿದರು.

ಶುಕ್ರವಾರ ಬೆಳಗ್ಗೆ ಕಲಬುರಗಿ- ಧಾರವಾಡ ಬಸ್‌ಗೆ ಚಾಲನೆ ನೀಡಿ ಮಾತನಾಡಿ, ಕಲಬುರಗಿ ವಿಭಾಗದ 3ನೇ ಘಟಕದ ಬಸ್ ಕಲಬುರಗಿಯಿಂದ ಬೆಳಗ್ಗೆ 10ಕ್ಕೆ ಹೊರಟು, 12ಕ್ಕೆ ಯಡ್ರಾಮಿ ತಲುಪಲಿದೆ. ಬಳಿಕ ಕೆಂಭಾವಿ-ಮುz್ದೆÃಬಿಹಾಳ ಮಾರ್ಗವಾಗಿ ಧಾರವಾಡ ತೆರಳುವುದು. 2ನೇ ಘಟಕದ ಬಸ್ ಕಲಬುರಗಿಯಿಂದ ಬೆಳಗ್ಗೆ 8ಕ್ಕೆ ಸಂಚರಿಸಿ, 10ಕ್ಕೆ ಯಡ್ರಾಮಿ ತಲುಪಲಿದೆ. ಜೇವರ್ಗಿಯಿಂದ 12.30ಕ್ಕೆ ಬಿಟ್ಟು, 1.20ಕ್ಕೆ ಯಡ್ರಾಮಿ ತಲುಪಲಿದೆ. ಆಳಂದನಿAದ ಬೆಳಗ್ಗೆ 7ಕ್ಕೆ ಹೊರಟು, ಗಾಣಗಾಪುರ-ಜೇರಟಗಿ ಮಾರ್ಗವಾಗಿ 11ಕ್ಕೆ ಯಡ್ರಾಮಿ ತಲುಪಲಿದೆ. ಅಫಜಲಪುರದಿಂದ ಬೆಳಗ್ಗೆ 7ಕ್ಕೆ ಹೊರಟು, ಘತ್ತರಗಿ-ಮೋರಟಗಿ ಮಾರ್ಗವಾಗಿ 9ಕ್ಕೆ ಯಡ್ರಾಮಿ ತಲುಪಲಿದೆ. ದೇವದುರ್ಗದಿಂದ ಬೆಳಗ್ಗೆ 7.30ಕ್ಕೆ ಸಂಚರಿಸುವ ಬಸ್ ಸುರಪುರ-ಕೆಂಭಾವಿ ಮಾರ್ಗವಾಗಿ 10ಕ್ಕೆ ಯಡ್ರಾಮಿ ತಲುಪಲಿದೆ. ಇದಲ್ಲದೆ ಜೇವರ್ಗಿಯಿಂದ ಯಡ್ರಾಮಿಗೆ ಒಂದು ತಡೆರಹಿತ ಬಸ್ ಓಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಪ್ರಮುಖರಾದ ಬಸಯ್ಯಸ್ವಾಮಿ ಹೊರಗಿನಮಠ, ಇಬ್ರಾಹಿಂಸಾಬ್ ಉಸ್ತಾದ್, ರಜಾಕ್ ಮನಿಯಾರ್, ಬಸವರಾಜ ಪವಾರ್, ಸೀತಾರಾಮ ರಾಠೋಡ್, ಶ್ರೀಶೈಲ್ ರಾಠೋಡ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net