ಯಡವನಾಡು ಮೀಸಲು ಅರಣ್ಯದಲ್ಲಿ ಶ್ರಮದಾನ

11SPT2
ಸೋಮವಾರಪೇಟೆ ಆರಣ್ಯ ಇಲಾಖೆಯ ವತಿಯಿಂದ ಯಡವನಾಡು ಮೀಸಲು ಅರಣ್ಯದೊಳಗಿನ ರಾಜ್ಯ ಹೆದ್ದಾರಿಯಲ್ಲಿ ನಡೆದ ಸ್ವಚ್ಚತಾ ಕಾರ್ಯದಲ್ಲಿ ಸಿಬ್ಬಂದಿ ಪ್ಲಾಸ್ಟಿಕ್ ಸೇರಿದಂತೆ ಇನ್ನಿತರ ವಸ್ತುಗಳು ಹೆಕ್ಕಿ ಸ್ವಚ್ಚಗೊಳಿಸಿದರು.
Published on

ಸೋಮವಾರಪೇಟೆ: ಅರಣ್ಯ ಇಲಾಖೆಯ ವತಿಯಿಂದ ಯಡವನಾಡು ಮೀಸಲು ಅರಣ್ಯ ವ್ಯಾಪ್ತಿಯ ಮುಖ್ಯ ರಸ್ತೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ ಬುಧವಾರ ನಡೆಯಿತು.

ಯಡನವನಾಡು ಗ್ರಾಮದಿಂದ ಬೇಳೂರುಬಾಣೆಯ ತನಕ ರಸ್ತೆಯ ಇಕ್ಕೆಲಗಳಲ್ಲಿ ಸಂಗ್ರಹವಾಗಿದ್ದ ಪ್ಲಾಸ್ಟಿಕ್ ಮತ್ತು ಬಾಟಲ್‌ಗಳನ್ನು ಸಿಬ್ಬಂದಿ ಸ್ವಚ್ಛಗೊಳಿಸಿದರು. ಆರ್‌ಎಫ್‌ಒ ಶೈಲೇಂದ್ರ ಮಾತನಾಡಿ, ಬೇಳೂರು ಗ್ರಾಮದಿಂದ ಯಡವನಾಡು ತನಕ ರಸ್ತೆಯ ಬದಿಯಲ್ಲಿ ಮೀಸಲು ಅರಣ್ಯವಿದ್ದು, 4 ಕಿ.ಮೀ. ತನಕ ಯಾವುದೇ ಕಟ್ಟಡ ಇಲ್ಲ. ವನ್ಯಪ್ರಾಣಿಗಳು ಸಂಚರಿಸುವ ಸ್ಥಳವಾಗಿರುವುದರಿಂದ ವಾಹನಗಳನ್ನು ನಿಲ್ಲಿಸುವುದನ್ನು ನಿಷೇಧಿಸಲಾಗಿದೆ. ಆದರೂ ಕೆಲ ಪ್ರವಾಸಿಗರು ವಾಹನಗಳನ್ನು ನಿಲ್ಲಿಸುತ್ತಾರೆ. ಪ್ಲಾಸ್ಟಿಕ್ ಮತ್ತು ಬಾಟಲ್ ಎಸೆಯುತ್ತಾರೆ. ಇವುಗಳನ್ನು ಪ್ರಾಣಿಗಳು ತಿಂದು ಅಸ್ವಸ್ಥಗೊಳುತ್ತಿವೆ. ಈ ಕಾರಣದಿಂದ ಸ್ವಚ್ಛತಾ ಕಾರ್ಯ ನಡೆದಿದೆ. ಈ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net