ಯಕ್ಷಶ್ರೀ ಸಂಸ್ಥೆ ಕ್ರಿಯಾಶೀಲತೆಗೆ ಸಾಕ್ಷಿ

06 SGR 04
Published on

ಸಾಗರ: ಸಂಸ್ಥೆಯೊಂದು 25 ವರ್ಷಗಳಿಂದ ನಡೆಸಿರುವುದರ ಜತೆಗೆ ದಾಖಲೆಗಳನ್ನು ವ್ಯವಸ್ಥಿತವಾಗಿ ಸಂಗ್ರಹಿಸಿಡುವ ಕಾರ್ಯ ಮಾಡಿರುವುದು ಸಂಸ್ಥೆಯ ಕ್ರಿಯಾಶೀಲತೆಗೆ ಸಾಕ್ಷಿ ಎಂದು ಯಕ್ಷಗಾನ ಕಲಾವಿದ ರಮೇಶ್ ಹೆಗಡೆ ಗುಂಡೂಮನೆ ಹೇಳಿದರು.

ವಿಜಯ ಸೇವಾ ಟ್ರಸ್ಟ್, ಯಕ್ಷಶ್ರೀ ಸಂಸ್ಥೆಯಿಂದ ಸಾಗರದ ನೃತ್ಯಭಾಸ್ಕರ ಸಭಾಂಗಣದಲ್ಲಿ ಶನಿವಾರ ಯಕ್ಷಶ್ರೀ ರಜತ ಸಂಭ್ರಮದ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಂಸ್ಥೆಯ 25 ವರ್ಷಗಳ ಮಾಹಿತಿ ದಾಖಲೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಆ ಕ್ಷಣಕ್ಕೆ ಕಾರ್ಯಕ್ರಮ ಮಾಡುವುದು ಮಾತ್ರ ಮುಖ್ಯವಲ್ಲ. ಮುಂದಿನ ಪೀಳಿಗೆಗೆ ಸಂಸ್ಥೆಯ ನಿಜವಾದ ಸಾಧನೆ ಗುರುತಿಸುವ ಮಾನದಂಡವಾಗಿ ಹಿಂದಿನ ದಾಖಲೆಗಳು ಮುಖ್ಯವಾಗಲಿದೆ. ಹಾಗಾಗಿ ಯಾವುದೇ ಸಂಸ್ಥೆ ಎಷ್ಟು ಕಾಲ ಇದೆ ಎನ್ನುವುದಕ್ಕಿಂತ ತನ್ನೊಂದಿಗೆ ದಾಖಲೆ ಏನಿದೆ ಎನ್ನುವುದನ್ನು ಗಮನಿಸುವುದು ಮುಖ್ಯ ಎಂದರು.

ಯಕ್ಷಶ್ರೀ ಟ್ರಸ್ಟಿ ಎ.ಎಂ.ಸುಬ್ಬರಾವ್, ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ಡಾ.ಎಚ್.ಎಸ್. ಮೋಹನ್, ಕಾರ್ಯದರ್ಶಿ ಮನು ಮತ್ತಿತರರಿದ್ದರು. ನಂತರ ಯಕ್ಷ ಪ್ರವೀಣ ಕಲಾವೇದಿಕೆಯಿಂದ ಕಂಸವಧೆ ಯಕ್ಷಗಾನ ಪ್ರದರ್ಶನ ನಡೆಯಿತು. ಹಿಮ್ಮೇಳದಲ್ಲಿ ಪ್ರಶಾಂತ ಮಧ್ಯಸ್ಥ, ಮಂಜುನಾಥ್ ಗುಡ್ಡೆದಿಂಬ, ಅಶೋಕ ಕ್ಯಾಸನೂರು, ಮಹೇಶ್ ಮುಮ್ಮೇಳದಲ್ಲಿ ವೀಣಾ ಪ್ರಸನ್ನ ಕುಮಾರ್, ಸಾನಿಧ್ಯ, ನಾರಾಯಣ ಸ್ವಾಮಿ, ಯೋಗೀಶ್, ಸನಿಹ, ನಾಗರಾಜ್, ಆಂತರ್ಯ, ವಂದನಾ, ವರ್ಷಿಣಿ, ಸಾನಿಕಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net