ಯಕ್ಷಗಾನ ಕಲಾ ಪ್ರದರ್ಶನ

ಯಕ್ಷಗಾನ ಕಲಾ ಪ್ರದರ್ಶನ
Published on


ಚನ್ನರಾಯಪಟ್ಟಣ: ಫೆ.12ರಂದು ಪಂಜುರ್ಲಿ ಮತ್ತು ಗುಳಿಗ ದೈವಗಳ ಯಕ್ಷಗಾನ ಕಲಾ ನರ್ತನದ ಕಾರ್ಯಕ್ರಮದ ನವೋದಯ ವಿದ್ಯಾ ಸಂಸ್ಥೆ ಆವರಣದಲ್ಲಿ ಜರಗಲಿದೆ ಎಂದು ಹೇಮಾವಾಣಿ ಪ್ರಕಾಶನ ಮುಖ್ಯಸ್ಥ ಪುಟ್ಟಣ್ಣ ಗೋಕಾಕ್ ಹೇಳಿದರು.


ತಾಲೂಕು ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಾಸನ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಪಂಜುರ್ಲಿ ಮತ್ತು ಗುಳಿಗೆ ದೈವಗಳ ಯಕ್ಷಗಾನ ಕಲಾ ಪ್ರದರ್ಶನ ನಡೆಯುತ್ತಿರುವುದು ಇತಿಹಾಸ ಎಂದರು.


ಫೆ.12 ರ ಭಾನುವಾರ ಬೆಳಗ್ಗೆ 8 ಗಂಟೆಗೆ ಗ್ರಾಮ ದೇವತೆ ವಳಗೇರಮ್ಮನವರಿಗೆ ವಾದ್ಯದೊಂದಿಗೆ ಕಮಿಟಿಯ ಸದಸ್ಯರೆಲ್ಲರೂ ಕಾಲ್ನಡಿಗೆಯಲ್ಲಿ ತೆರಳಿ ವಿಶೇಷ ಪೂಜೆಯನ್ನು ನೆರವೇರಿಸಲಾಗುವುದು ಈ ಪೂಜೆಯು ನಾಡಿನ ಜನತೆಯ ಒಳಿತಾಗಲಿದೆ ಎಂದು ತಿಳಿಸಿದರು.


ಕಾರ್ಯಕ್ರಮಕ್ಕೆ ಆಗಮಿಸುವ ಎಲ್ಲಾ ಭಕ್ತಾಧಿಗಳಿಗೂ ಪ್ರವೇಶ ದ್ವಾರದಲ್ಲಿ ಪ್ರಸಾದ ನೀಡಲು ಒಮ್ಮತದಿಂದ ತಿಳಿಸಿ ಸಂಜೆ 5 ಗಂಟೆಗೆ ಭಾಗವತರ ಜೊತೆ ವೇಷಧಾರಿಗಳು ಚಂಡೆ ವಾದ್ಯದೊಂದಿಗೆ ಪಟ್ಟಣದ 40 ಅಡಿ ಆಂಜನೇಯ ಸ್ವಾಮಿ ದೇವಸ್ಥಾನ ಹಾಗೂ ಚನ್ನಕೇಶವ ದೇವಸ್ಥಾನಕ್ಕೆ ತೆರಳಿ ದೇವರ ಅಪ್ಪಣೆ ಪಡೆದು ಪೂಜೆ ಸಲ್ಲಿಸಲಾಗುತ್ತದೆ ಎಂದರು.


ಸಂಜೆ 5.30 ರಿಂದ ವೇದಿಕೆಯ ಮೇಲೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. 6 ಗಂಟೆಗೆ ಸಭಾ ಕಾರ್ಯಕ್ರಮ ಜರುಗಲಿದ್ದು ಗಣ್ಯರಿಂದ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. 6.30 ಗಂಟೆಗೆ ಚೌಕಿ ಪೂಜೆ ಸಲ್ಲಿಸಿ ದೇವರ ಅಪ್ಪಣೆ ಪಡೆದು ವೇಷದಾರಿಗಳು ಕಾರ್ಯಕ್ರಮವನ್ನು ಪ್ರಾರಂಭಿಸಲಿದ್ದಾರೆ ಎಂದು ಮಾಹಿತಿ ನೀಡಿದರು.


ಕಲಾ ಸಮಿತಿಯ ನಾಗರಾಜ್, ರಾಜ್‌ಕುಮಾರ್, ಸಿ.ಜಿ.ರವಿ, ಪಾಪಣ್ಣಿ, ಪುಟ್ಟೇಗೌಡ, ಜಗದೀಶ್, ಧರಣೇಶ್, ವಿನೋದ್ ಪೂಜಾರಿ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net