

ಚಿತ್ರದುರ್ಗ: ಮ್ಯಾನೇಜ್‌ಮೆಂಟ್/ಎನ್‌ಆರ್‌ಐ ಕೋಟಾದಡಿ ರಾಜ್ಯದ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆದಿರುವ ಪರಿಶಿಷ್ಟ ಜಾತಿ ವಿದ್ಯಾರ್ಥಿ ಗಳಿಗೆ ಇನ್ನು ಸಮಾಜ ಕಲ್ಯಾಣ ಇಲಾಖೆಯಿಂದ ಹಾಸ್ಟೆಲ್ ಸೌಲಭ್ಯ ದೊರಕಲಿದೆ.2013-14ನೇ ರಾಜ್ಯಸರ್ಕಾರದ ಬಜೆಟ್ ಘೋಷಣೆಯಂತೆ ಪರಿಶಿಷ್ಟ ಜಾತಿ ಎಲ್ಲ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸವಲತ್ತು ಕಲ್ಪಿಸಲು ಹಾಗೂ ವಿದ್ಯಾರ್ಥಿ ವೇತನ ನೀಡಲು ಸರ್ಕಾರ ಆದೇಶಿಸಿತ್ತು.
ಸರ್ಕಾರದ ನಿರ್ದೇಶನದಂತೆ,ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಮೆರಿಟ್ ಆಧಾರದ ಮೇಲೆ ಕರ್ನಾಟಕ ಪರೀಕ್ಷಾ ಪ್ರಾಧಿಕಾ ರದಿಂದ ಆಯ್ಕೆಯಾದ ಪರಿಶಿಷ್ಟ ಜಾತಿಯ ಎಲ್ಲ ಅರ್ಹ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಹಾಸ್ಟೆಲ್‌ಗ ಳಲ್ಲಿ,ವಿದ್ಯಾರ್ಥಿ ಕುಟುಂಬದ ವಾರ್ಷಿಕ ಆದಾಯ 2.50 ಲಕ್ಷ ರೂ.ಮಿತಿಯೊಳಗೆ ಇರಬೇಕೆಂಬ ಷರತ್ತಿಗೆ ಒಳಪಟ್ಟು ಪ್ರವೇಶ ನೀಡಲಾ ಗುತ್ತಿದೆ.
ಆದರೆ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಮ್ಯಾನೇಜ್‌ಮೆಂಟ್/ಎನ್‌ಆರ್‌ಐ ಕೋಟಾದಡಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾ ಣ ಇಲಾಖೆ ಪೋಸ್ಟ್‌ಮೆಟ್ರಿಕ್ ಹಾಸ್ಟೆಲ್‌ಗಳಲ್ಲಿ ಪ್ರವೇಶ ನೀಡಲಾಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಮ್ಯಾನೇಜ್‌ಮೆಂಟ್ ಕೋಟಾದಡಿ ವ್ಯಾಸಂ ಗ ಮಾಡುತ್ತಿರುವವರಿಗೂ ಹಾಸ್ಟೆಲ್ ಸೌಲಭ್ಯ ಕಲ್ಪಿಸಬೇಕೆಂಬ ಬೇಡಿಕೆ ಇತ್ತು.
ಇದನ್ನು ಪರಿಶೀಲಿಸಿದ ಸರ್ಕಾರ ಈಚೆಗೆ ಇವರಿಗೂ ಹಾಸ್ಟೆಲ್ ಸವಲತ್ತನ್ನು,ಅವರ ಕುಟುಂಬದ ವಾರ್ಷಿಕ ಆದಾಯ 2.50 ಲಕ್ಷ ರೂ. ಮಿತಿಗೆ ಒಳಪಡಿಸಿ ಒದಗಿಸಲು ಕಳೆದ ತಿಂಗಳ ಕೊನೆ ವಾರದಲ್ಲಿ ನಡೆದ ಸಂಪುಟ ಸಭೆಯಲ್ಲಿ ನಿರ್ಧಾರ ಕೈ ಗೊಂಡಿದೆ. ಇದರ ನಿರ್ವಹಣ ವೆಚ್ಚವನ್ನೂ ಭರಿಸಲು ಒಪ್ಪಿದೆ.
ಬಿ.ಇಡಿ,ನರ್ಸಿಂಗ್,ಪ್ಯಾರಾಮೆಡಿಕಲ್ ಇತ್ಯಾದಿ ಕೋರ್ಸ್‌ಗಳಿಗೆ ಸಂಬಂಧಿಸಿದಂತೆ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಅಂದಾಜು ಶೇ.50 ಮ್ಯಾನೇಜ್‌ಮೆಂಟ್ ಕೋಟಾ ಇರುತ್ತದೆ. ತಮಗೂ ಹಾಸ್ಟೆಲ್ ಸೌಲಭ್ಯ ಒದಗಿಸಬೇಕೆಂದು ವಿದ್ಯಾರ್ಥಿಗಳ ಒತ್ತಾಸೆಯಾಗಿತ್ತು. ಹಾಲಿ ವಿ ದ್ಯಾರ್ಥಿ ನಿಲಯದಲ್ಲಿ ಸ್ಥಳಾವಕಾಶ ಲಭ್ಯವಿಲ್ಲದಿದ್ದಲ್ಲಿ ಅಗತ್ಯಕ್ಕೆ ಅನುಗುಣವಾಗಿ ಬಾಡಿಗೆ ಕಟ್ಟಡಗಳನ್ನು ಪಡೆದು ವಿದ್ಯಾರ್ಥಿಗಳಿಗೆ ಪ್ರವೇ ಶಾವಕಾಶ ಕಲ್ಪಿಸ ಬೇಕೆಂದು ಸರ್ಕಾರ ಹೇಳಿದೆ.
ಕೋಟ್
ಸರ್ಕಾರ ಈ ಸೌಲಭ್ಯವನ್ನು ಮರು ಆರಂಭಿಸಿರುವುದರಿಂದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ವಿದ್ಯಾರ್ಥಿಗಳು ಎಚ್‌ಎಂಐಎಸ್ ಪೋರ್ಟಲ್ ಮೂಲಕ ಇ-ಕೆವೈಸಿಯೊಂದಿಗೆ ಅರ್ಜಿ ಸಲ್ಲಿಸಬೇಕು. ಚಿತ್ರದುರ್ಗ ಜಿಲ್ಲೆಯಲ್ಲಿ ಇಲಾಖೆಯ ಮೆಟ್ರಿಕ್ ಪೂ ರ್ವ ಮತ್ತು ನಂತರದ ಒಟ್ಟು 93 ಹಾಸ್ಟೆಲ್‌ಗಳಿದ್ದು,ಇವುಗಳಲ್ಲಿ 52 ಪೋಸ್ಟ್‌ಮೆಟ್ರಿಕ್ ಹಾಸ್ಟೆಲ್‌ಗಳಿವೆ.
ಜಗದೀಶ್‌ಹೆಬ್ಬಳ್ಳಿ,ಜಂಟಿ ನಿರ್ದೇಶಕ,ಸಮಾಜ ಕಲ್ಯಾಣ ಇಲಾಖೆ,ಚಿತ್ರದುರ್ಗ
---