ಮ್ಯಾಟ್ರೆಸ್ ಮಾರಾಟದಲ್ಲಿ ನ್ಯೂಸೆಲೆಕ್ಷನ್ ಬೆಡ್ಡಿಂಗ್ ಹೌಸ್ ಎತ್ತಿದ ಕೈ

CTD NEW SLEKCTION BEDDING HOUSE
Published on

ಚಿತ್ರದುರ್ಗ: ರೆಪೋಸ್ ಮ್ಯಾಟ್ರೆಸ್ ಕಂಪನಿ ಉತ್ಪನ್ನಗಳ ಅಧಿಕೃತ ಮಾರಾಟದಲ್ಲಿ ಚಿತ್ರದುರ್ಗದ ನ್ಯೂ ಸೆಲೆಕ್ಷನ್ ಬೆಡ್ಡಿಂಗ್ ಹೌಸ್ ರಾಜ್ಯದಲ್ಲೇ ಅತ್ಯುತ್ತಮ ಹೆಸರು ಪಡೆದಿದೆ.

ನಗರದ ನೀಲಕಂಠೇಶ್ವರ ದೇವಾಲಯ ಬಳಿ 1990 ರಲ್ಲಿ ಆರಂಭವಾದ ಈ ಬೆಡ್ಡಿಂಗ್‌ಹೌಸ್‌ನಲ್ಲಿ ಸ್ಪರ್ಧಾತ್ಮಕ, ಕೈಗೆಟುಕುವ ದರದಲ್ಲಿ ಒಳಾಂಗಣ ಅಲಂಕಾರ ವಸ್ತುಗಳು ಲಭ್ಯ. ಇದರ ಮಾಲೀಕ ಅಸ್ಲಾಂಬಾಷ, ರೆಪೋಸ್ ಕಂಪನಿಯ ಕರ್ನಾಟಕದ ಟಾಪ್‌ಟೆನ್ ಡೀಲರ್‌ಗಳ ಪೈಕಿ ಒಬ್ಬರಾಗಿದ್ದಾರೆ. ಮ್ಯಾಟ್ರೆಸ್, ಬೆಡ್‌ಕ್ಲಾತ್, ಡೋರ್‌ಮ್ಯಾಟ್, ಪ್ಲೋರಿಂಗ್ ಮ್ಯಾಟ್ ಮತ್ತಿತರ ಖರೀದಿಗೆ ನೆಚ್ಚಿನ ತಾಣವಾಗಿದೆ.

ರೆಪೋಸ್‌ನೊಂದಿಗೆ, ಡ್ಯೂರೋಫ್ಲೆಕ್ಸ್, ಮಾರ್ಗನ್ ಪ್ಲೆಕ್ಸ್, ರೇಮಂಡ್, ಸ್ಲೀಪ್‌ಕ್ರಾಫ್ಟ್, ಮ್ಯಾಕ್ಸ್‌ವೆಲ್, ಫಾರ್ಚೂನ್ ಮತ್ತಿತರ ಕಂಪನಿಗಳ ಕಾಯರ್‌ಫೋಮ್ ಆ್ಯಂಡ್ ಸ್ಪ್ರಿಂಗ್ ಮ್ಯಾಟ್ರೆಸ್, ಕಾಟನ್ ಬೆಡ್ಸ್, ಹ್ಯಾಂಡ್‌ಲೂಮ್ ಬೆಡ್‌ಕ್ಲಾತ್ಸ್, ಬೆಡ್‌ಶೀಟ್ಸ್ ಆ್ಯಂಡ್ ಬೆಡ್‌ಸ್ಪ್ರೆಡ್ಸ್, ಕರ್ಟನ್ ಕ್ಲಾತ್, ದಿಂಬು, ಮಸ್ಕಿಟೊ ನೆಟ್, ವಾಲ್‌ಪೇಪರ್ ಇತ್ಯಾದಿ ಹಾಗೂ ವಿವಿಧ ಮಾದರಿ ಕರ್ಟನ್‌ಗಳು ಲಭ್ಯವಿದೆ.

ಕನಿಷ್ಠ 3 ಸಾವಿರ ರೂ.ಗಳಿಂ ದ 1.50-2 ಲಕ್ಷ ರೂ.ವರೆಗೂ ಮ್ಯಾಟ್ರೆಸ್‌ಗಳನ್ನು ಖರೀದಿಸಬಹುದು. ಲಾಕರ್‌ಬೆಡ್, ಸ್ಪೈನ್‌ಪ್ರೊ, ಅರ್ಥೋ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಆರೋಗ್ಯಕ್ಕೆ ಪೂರಕವಾದ ರೆಪೋಸ್ ಮ್ಯಾಟ್ರೆಸ್‌ಗಳು ಇಲ್ಲಿ ದಾಖಲೆ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ.

--

ಅದೃಷ್ಟ ನಿಮ್ಮದು,ಕೊಡುಗೆ ನಮ್ಮದು

ವಿಜಯವಾಣಿ ವಿಜಯೋತ್ಸವದಲ್ಲಿ ಈ ಬೆಡ್ಡಿಂಗ್‌ಹೌಸ್‌ಪಾಲ್ಗೊಂಡಿದೆ. ಕನಿಷ್ಠ ಎರಡು ಸಾವಿರ ರೂ.ಮೌಲ್ಯದ ಖರೀದಿಗೆ ಅದೃಷ್ಟದ ಕೂಪನ್‌ಗಳನ್ನು ಪಡೆಯಲು ಅವಕಾಶವಿದೆ.

---

ಬೈ ಒನ್ ಗೆಟ್ ಒನ್ ಫ್ರೀ

ದೀಪಾವಳಿ ಅಂಗವಾಗಿ ಈ ಬೆಡ್ಡಿಂಗ್ ಹೌಸ್‌ನಲ್ಲಿ ಬೈ ಒನ್ ಗೆಟ್ ಒನ್ ಫ್ರೀ ಸ್ಕೀಂ ಘೋಷಿಸಲಾಗಿದೆ. ಆಯ್ದ ಉತ್ಪನ್ನಗಳ ಪೈಕಿ ಒಂದನ್ನು ಖರೀದಿಸಿದರೆ ಮತ್ತೊಂದು ಉಚಿತವಾಗಿ ಸಿಗಲಿದೆ.

----

ಕೋಟ್

ಹನ್ನೊಂದು ವರ್ಷಗಳ ಹಿಂದೆ ಸ್ಪ್ರಿಂಗ್ ಮ್ಯಾಟ್ರೆಸ್ ಮೂಲಕ ಈ ಉದ್ಯಮದಲ್ಲಿ ಕಾಲೂರಿರುವ ರೆಪೋಸ್ ಇಂದು ಗುಣಮಟ್ಟದ, ಗ್ರಾಹಕರ ಕೈಗೆಟುಕುವ ಉತ್ಪನ್ನಗಳ ತಯಾರಿಕೆಗೆ ಹೆಸರಾಗಿದೆ. ದೇಶದ 22 ರಾಜ್ಯಗಳಲ್ಲಿ ಸಾವಿರಾರು ಡೀಲರ್‌ಗಳನ್ನು ಹೊಂದಿದೆ. ಗಾಜಿಯಾಬಾದ್, ಕೊಯಂಬತ್ತೂರು, ಪುಣೆ, ಹೈದರಾಬಾದ್, ಗ್ವಾಲಿಯರ್, ಸಿರಿಗುಡಿ ಹಾಗೂ ಅಹಮದಾಬಾದ್‌ನಲ್ಲಿ ಫ್ಯಾಕ್ಟರಿಗಳಿವೆ.

ಕೃಷ್ಣ ಬಿ.ಕಾವೇರಿ, ರೆಪೋಸ್ ಕಂಪನಿ, ಎಜಿಎಂ, ಸೇಲ್ಸ್ ಆ್ಯಂಡ್ ಬಿಜಿನೆಸ್ ಡೆವಲಪ್‌ಮೆಂಟ್, ಕರ್ನಾಟಕ

----

ಕೋಟ್

ನಮ್ಮ ಕಂಪನಿ ದೇಶಾದ್ಯಂತ ಎರಡು ಸಾವಿರಕ್ಕೂ ಅಧಿಕ ಡೀಲರ್‌ಗಳನ್ನು ಹೊಂದಿದೆ. ತಮ್ಮ ಬಜೆಟ್‌ಗೆ ತಕ್ಕಂತೆ ಗ್ರಾಹಕರಿಗೆ ನಮ್ಮಲ್ಲಿ ಕ್ವಾ ಲಿಟಿ ಉತ್ಪನ್ನಗಳು ದೊರಕುತ್ತವೆ. ಪಂಚತಾರಾ ಹೋಟೆಲ್‌ಗಳಿಂದ ಸಹ ರೆಪೋಸ್‌ಗೆ ಬೇಡಿಕೆ ಇದೆ. ದಕ್ಷಿಣ ಭಾರತದ ಎಲ್ಲ ಭಾಷೆಗಳಲ್ಲೂ ಬ್ರಾೃಂಡ್ ಪ್ರಚಾರ ಭರಾಟೆ ಜೋರಾಗಿದೆ. ಗ್ರಾಹಕರ ತೃಪ್ತಿ ಸೂಚ್ಯಂಕ ಅತ್ಯುತ್ತಮವಾಗಿದೆ.

ರಾಮನಾಥ್‌ಎನ್.ಭಟ್, ರೆಪೋಸ್ ಕಂಪನಿ, ಜಾಯಿಂಟ್ ಮ್ಯಾನೇಜಿಂಗ್ ಡೈರೆಕ್ಟರ್ ಸೇಲ್ಸ್ ಆ್ಯಂಡ್ ಬಿಜಿನೆಸ್ ಡೆವಲಪ್‌ಮೆಂಟ್, ಕರ್ನಾಟಕ

----

ಕೋಟ್

ಆನ್‌ಲೈನ್ ಖರೀದಿ ಗ್ರಾಹಕರಿಗೆ ತೃಪ್ತಿ ತರದೇ ಇರಬಹುದು. ಡೀಲರ್‌ಗಳಿಂದ ಉತ್ಪನ್ನಗಳ ಕ್ವಾಲಿಟಿ, ಬಾಳಿಕೆ, ಅಗತ್ಯತೆ ಬಗ್ಗೆ ಪೂರ್ಣ ಮಾಹಿತಿ ಪಡೆಯಬಹುದು. ಆರೋಗ್ಯಕ್ಕೆ ಪೂರಕವಾದ ಮ್ಯಾಟ್ರೆಸ್‌ಗಳ ಮಾಹಿತಿ ಪಡೆದು ಖರೀದಿಸಬಹುದು. ಅಸ್ಲಾಂಬಾಷಾ ಮಾದರಿ ಡೀಲರ್ ಆಗಿದ್ದಾರೆ. ದೇಶದ ಇನ್ನುಳಿದ ರಾಜ್ಯಗಳಲ್ಲೂ ವಹಿವಾಟು ವಿಸ್ತರಣೆಗೆ ಯೋಜಿಸಲಾಗುತ್ತಿದೆ.

ರವಿ ಸಿ.ಪಂಡಿತ್, ರೆಪೋಸ್ ಕಂಪನಿ, ಡೈರೆಕ್ಟರ್ ನ್ಯಾಷನಲ್ ಸೇಲ್ಸ್ ಆ್ಯಂಡ್ ಬಿಜಿನೆಸ್ ಡೆವಲಪ್‌ಮೆಂಟ್

---

ಕೋಟ್

ಏಳೆಂಟು ವರ್ಷಗಳಿಂದ ನ್ಯೂಸೆಲೆಕ್ಷನ್ ಬೆಡ್ಡಿಂಗ್ ಹೌಸ್‌ನಲ್ಲಿ ಮ್ಯಾಟ್ರೆಸ್ ಖರೀದಿಸಿದ್ದೇನೆ. ಗುಣಮಟ್ಟಕ್ಕೆ ಹೆಸರಾಗಿದೆ. ದಾವಣಗೆರೆ, ಶಿವಮೊಗ್ಗ, ಬೆಂಗಳೂರು ಮತ್ತಿರೆಡೆ ಇರುವ ನಮ್ಮ ಸಂಬಂಧಿಕರಿಗೂ ಇಲ್ಲಿಂದ ಖರೀದಿಸಿ ಕಳಿಸಿದ್ದೇನೆ.

ಜಿ.ಕೆ.ರಾಕೇಶ್,ಗ್ರಾಹಕ,ಚಿತ್ರದುರ್ಗ

---

ಕೋಟ್

ಗ್ರಾಹಕರ ಬೇಡಿಕೆ ಅಗತ್ಯವಾಗಿ ನಮ್ಮಲ್ಲಿ ಹತ್ತು ಹಲವು ಗುಣಮಟ್ಟದ ಉತ್ಪನ್ನಗಳನ್ನು ಸ್ಪರ್ಧಾತ್ಮಕ ದರದಲ್ಲಿ ಮಾರಾಟ ಮಾಡುತ್ತಿದ್ದೇವೆ. ಒಮ್ಮೆ ಬರುವ ಗ್ರಾಹಕ ಮತ್ತೆ ತಮ್ಮೊಂದಿಗೆ ಹಲವು ಗ್ರಾಹಕರನ್ನು ಕರೆತರುತ್ತಾರೆ. ತಯಾರಕರಿಂದ ನೇರ ಗ್ರಾಹಕರಿಗೆ ಎಂಬ ಧ್ಯೇಯದೊಂದಿಗೆ ವಿವಿಧ ಕಂಪನಿ ಉತ್ಪನ್ನ ಮಾರುತ್ತಿದ್ದೇವೆ. ರೆಪೋಸ್‌ಗೂ ಉತ್ತಮ ಬೇಡಿಕೆ ಇದೆ. ಗ್ರಾಹಕರ ತೃಪ್ತಿ ನಮ್ಮ ಶಾಪ್‌ನ ಜನಪ್ರಿಯತೆಗೆ ಕಾರಣವಾಗಿದೆ. ರೆಪೋಸ್ ಕಂಪನಿ ಅಧಿಕಾರಿಗಳ ಸಹಕಾರವೂ ಚೆನ್ನಾಗಿದೆ.

ಅಸ್ಲಾಂಬಾಷಾ, ನ್ಯೂ ಸೆಲೆಕ್ಷನ್ ಬೆಡ್ಡಿಂಗ್ ಹೌಸ್ ಮಾಲೀಕ, ಚಿತ್ರದುರ್ಗ.

---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net