ಮೌಲ್ಯಯುತ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಿ

9 Shahapur 02
ಭೀಮರಾಯನಗುಡಿ ಕೃಷಿ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಶಹಾಪುರ ತಾಲೂಕು ಖಾಸಗಿ ಶಾಲೆಗಳ ೨ನೇ ಸಮ್ಮೇಳನ ಹಾಗೂ ಉತ್ತಮ ಶಿಕ್ಷಕರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಖಾಸಗಿ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಉತ್ತಮ ಶಿಕ್ಷಕರನ್ನು ಗೌರವಿಸಲಾಯಿತು. ಸಚಿವ ಶರಣಬಸಪ್ಪ ದರ್ಶನಾಪುರ, ಬಿಇಒ ಶಿಬಾ ಜಿಲಿಯನ್, ಆರ್.ಚನ್ನಬಸ್ಸು ವನದುರ್ಗ, ಡಾ.ಭೀಮಣ್ಣ ಮೇಟಿ, ಡಾ.ಪಿ.ಎಚ್.ಕುಚನೂರ, ಶರಣಗೌಡ ಪಾಟೀಲ್, ವಿ.ಸತ್ಯಂರೆಡ್ಡಿ, ಲೀನಾ ಪ್ರೇಮಾನಂದಂ ಇತರರಿದ್ದರು.
Published on

ಶಹಾಪುರ: ನಿರಂತರ ಜತೆಗೆ ಪರಿಣಾಮಕಾರಿ ಬೋಧನೆ ಮೂಲಕ ಮೌಲ್ಯಯುತ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ಗುರುತರ ಹೊಣೆಗಾರಿಕೆ ಶಿಕ್ಷಕರ ಮೇಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು.

ಭೀಮರಾಯನಗುಡಿ ಕೃಷಿ ಮಹಾವಿದ್ಯಾಲಯ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಶಹಾಪುರ ತಾಲೂಕು ಖಾಸಗಿ ಶಾಲೆಗಳ ೨ನೇ ಸಮ್ಮೇಳನ ಹಾಗೂ ಉತ್ತಮ ಶಿಕ್ಷಕರ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿದ ಅವರು, ಖಾಸಗಿ ಶಿಕ್ಷಣ ಸಂಸ್ಥೆಗಳು ತಮ್ಮದೇ ಆದ ದೂರದೃಷ್ಟಿಯೊಂದಿಗೆ ಅಕ್ಷರ ಸೇವೆಯಲ್ಲಿ ತೊಡಗಿರುವುದು ಸಾರ್ಥಕ ಎನಿಸಿದೆ ಎಂದರು.

ಈ ಭಾಗದಲ್ಲಿ ೩೭೧(ಜೆ) ವಿಧಿಯಿಂದ ಉದ್ಯೋಗ ಮತ್ತು ಶಿಕ್ಷಣಕ್ಕೆ ಆನೆಬಲ ಬಂದಿದೆ. ಶಿಕ್ಷಣದಲ್ಲಿ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳು ಕೊನೆಯ ಸ್ಥಾನದಲ್ಲಿವೆ. ಒಳ್ಳೆಯ ಶಾಲೆಗಳಲ್ಲಿ ಬಡ ಮಕ್ಕಳ ಶಿಕ್ಷಣಕ್ಕೆ ಆರ್‌ಟಿಇ ಅನುಕೂಲಕರ ಆಗಿದ್ದರಿಂದ ಇದರ ಪುನರಾರಂಭ ಆಗಬೇಕಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ತಾಲೂಕು ಖಾಸಗಿ ಶಾಲೆಗಳ ಒಕ್ಕೂಟದ ಅಧ್ಯಕ್ಷ, ನ್ಯಾಯವಾದಿ ಆರ್.ಚನ್ನಬಸ್ಸು ವನದುರ್ಗ ಮಾತನಾಡಿ, ಖಾಸಗಿ ಶಾಲೆಗಳು ಮೂಲಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಶಾಲೆಗಳ ಮನ್ನಣೆ ನವೀಕರಣ ಇತರ ಕೆಲಸ ಸರಳಗೊಳಿಸಬೇಕು ಎಂದು ಕೋರಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಶಿಬಾ ಜಿಲಿಯನ್, ಡಾ.ಭೀಮಣ್ಣ ಮೇಟಿ ಮಾತನಾಡಿದರು. ಕೃಷಿ ಕಾಲೇಜಿನ ಡೀನ್ ಡಾ.ಪಿ.ಎಚ್. ಕುಚನೂರ, ಶರಣಗೌಡ ಪಾಟೀಲ್, ವಿ.ಸತ್ಯಂರೆಡ್ಡಿ, ಲೀನಾ ಪ್ರೇಮಾನಂದಂ, ಪ್ರದೀಪ ಪುರ್ಲೆ, ಶರಣಗೌಡ ಮುನಮುಟಿಗಿ, ನಾಸಿರುದ್ದೀನ್ ಲಲ್ಲೋಟಿ, ಜಯಪ್ರಕಾಶ ಚೌದ್ರಿ, ತಿಪ್ಪಣ್ಣ ಕ್ಯಾತನಾಳ, ಶ್ರೀಕಾಂತ ಜೈನ್, ಅವಿನಾಶ ಶಿನ್ನೂರು, ಅಮೃತಲಾಲ್ ಜೈನ್, ಡಾ.ದೇವಿಂದ್ರಪ್ಪ ಹಡಪದ, ಶಿವನಗೌಡ ಮಾಲಿಪಾಟೀಲ್, ಇಸ್ಮಾಯಿಲ್ ಸೌದಾಗರ್, ಕಲೀಲಾ ಉನ್ನೀಸ್, ಭೀಮಣ್ಣಗೌಡ ಬಿರಾದಾರ, ಭೀಮನಗೌಡ ಪಾಟೀಲ್, ಸದಾಶಿವಯ್ಯ ಆಧೋನಿ ಇತರರಿದ್ದರು.
ಮಲ್ಲಯ್ಯ ಹಿರೇಮಠ ತಂಡ ಸಂಗೀತ, ಶಾರದಾ ವಿದ್ಯಾನಿಕೇತನ ಮತ್ತು ಸ್ವಾಮಿ ವಿವೇಕಾನಂದ ಶಾಲೆ ವಿದ್ಯಾರ್ಥಿಗಳು ಪ್ರಾರ್ಥನೆ ನಡೆಸಿಕೊಟ್ಟರು. ದೋರನಹಳ್ಳಿಯ ರಾಜೀವ್‌ಗಾಂಧಿ ಶಾಲೆ ವಿದ್ಯಾರ್ಥಿಗಳು ಭರತನಾಟ್ಯ ಪ್ರದರ್ಶಿಸಿದರು. ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net