ಮೌಲ್ಯಯುತ ಪಾಠ ನೀಡಿ

Published on

ಔರಾದ್: ಮನುಷ್ಯನ ಯಾಂತ್ರಿಕ ಬದುಕಿನಲ್ಲಿ ಒತ್ತಡದ ಮಧ್ಯೆ ಕೆಲಸ ನಿರ್ವಹಿಸುವುದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು, ಇಂತಹ ವೇಳೆ ಶಿಕ್ಷಕರು ಮಕ್ಕಳಿಗೆ ಮೌಲ್ಯಯುತ ಪಾಠ ಮಾಡಬೇಕು ಎಂದು ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾನಿಲಯದ ಬಿಕೆ ಸುಹಾಸಿನಿ ಬಹೇನ್ ಹೇಳಿದರು.
ಪಟ್ಟಣದಲ್ಲಿ ಬ್ರಹ್ಮ ಕುಮಾರಿ ಈಶ್ವರಿ ವಿಶ್ವವಿದ್ಯಾನಿಲಯದಲ್ಲಿ ಶನಿವಾರ ಏರ್ಪಡಿಸಿದ್ದ ಶಿP್ಷÀಕ ದಿನಾಚರಣೆಯಲ್ಲಿ ಮಾತನಾಡಿ, ಶಿP್ಷÀಕರಿಂದಲೇ ಸದೃಢ ದೇಶ ನಿರ್ಮಾಣ ಸಾಧ್ಯ. ನಾವು ಮಾನಸಿಕ ನೆಮ್ಮದಿ ಕಳೆದುಕೊಂಡಲ್ಲಿ ಜೀವನದಲ್ಲಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಮಾನಸಿಕ ಒತ್ತಡ ಹಾಗೂ ಅಶಾಂತಿಯಿAದ ನೆಮ್ಮದಿ ದೂರಾಗುತ್ತದೆ. ಸಹಜ ರಾಜಯೋಗದಿಂದ ಸ್ವಾಸ್ಥ ಹಾಗೂ ಆರೋಗ್ಯಕರ ಮಕ್ಕಳ ನಿರ್ಮಾಣ ಸಾಧ್ಯ ಎಂದು ತಿಳಿಸಿದರು.
ಔರಾದ್ ಮತ್ತು ಕಮಲನಗರ ತಾಲೂಕಿನ ೨೦೦ಕ್ಕೂ ಹೆಚ್ಚಿನ ಶಿP್ಷÀಕರನ್ನು ಸತ್ಕರಿಸಲಾಯಿತು. ಬಿಕೆ ಶಾಂತಾ ಅಕ್ಕ, ಬಿಕೆ ಛಾಯಾ ಅಕ್ಕ, ಪ್ರಮುಖರಾದ ಜಯಶ್ರೀ ದ್ಯಾಡೆ, ವನಿತಾ ರಾಗಾ, ಅರ್ಚನಾ, ಕಲ್ಯಾಣರಾವ ಶೆಂಬೆಳ್ಳೆ, ಡಿ.ಡಿ ಬೊಳೇಗಾವೆ, ಗಂಗಾರೆಡ್ಡಿ ಇಂದೂರೆ, ಸಂಗಪ್ಪ ಘಾಟೆ, ಗೋವಿಂದರಾವ ಪಾಟೀಲï, ಚಂದ್ರಕಾAತ ನಿರ್ಮಳೆ, ಮಲ್ಲಿಕಾರ್ಜುನ ರಾಗಾ, ಮಹಾದೇವ ಲಕ್ಕಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net