

ಚಿಕ್ಕಮಗಳೂರು: ಮಹಾತ್ಮ ಗಾಂಧೀಜಿ ಅವರು ಮೌಲ್ಯ ಪ್ರತಿಪಾದನೆಯ ಅನುಯಾಯಿ. ಅಹಿಂಸೆ ಪರ ಹಾಗೂ ಸ್ವದೇಶಿ ಅಭಿಯಾನಕ್ಕೆ ಮುನ್ನುಡಿ ಬರೆದವರು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಬಣ್ಣಿಸಿದರು.
ನಗರದ ರತ್ನಗಿರಿ ಬೋರೆಯಲ್ಲಿ ಬಿಜೆಪಿ ನಗರ ಮಂಡಲದಿAದ ಆಯೋಜಿಸಿದ್ದ ಮಹಾತ್ಮ ಗಾಂಧೀಜಿ ಜಯಂತಿ ಪ್ರಯುಕ್ತ ಗಾಂಧೀಜಿ ಪುತ್ಥಳಿಗೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಅವರು, ಗಾಂಧೀಜಿ, ಲಾಲ್‌ಬಹದ್ದೂರ್ ಶಾಸ್ತಿç ಹಾಗೂ ಸ್ವಯಂಸೇವಕ ಸಂಘದ ಶತಾಬ್ದಿ ಈ ಮೂರು ವಿಶೇಷ ಆಚರಣೆಗಳು ವಿಜಯ ದಶಮಿ ದಿನ ಕೂಡಿ ಬಂದಿರುವುದು ಸಂತಸದ ಸಂಗತಿ ಎಂದರು.
ಗಾAಧಿ ಎಂದರೆ ಸತ್ಯದ ಹಾದಿಯಲ್ಲಿ ನಡೆದವರು. ಸ್ವಭಾಷಾ, ಸ್ವದೇಶಿ ಮಹತ್ವ ಕೊಟ್ಟು ಭಾರತೀಯರ ಪಾಲಿಗೆ ಶ್ರೇಷ್ಟರಾದವರು. ದೈನಂದಿನ ಜೀವನದಲ್ಲಿ ನಾವುಗಳು ಸ್ವದೇಶಿ ಮತ್ತು ವಿದೇಶಿ ವಸ್ತುಗಳ ಪಟ್ಟಿ ಮಾಡಬೇಕು. ಬಳಿಕ ಒಂದು ಆಂದೋಲನದ ಮೂಲಕ ದಿನವು ಸ್ವದೇಶಿ ಬಳಕೆಗಳ ಉತ್ಪನ್ನಗಳಿಗೆ ಒತ್ತು ನೀಡಿದರೆ ದೇಶವು ಉದ್ಯೋಗದಲ್ಲಿ ಉನ್ನತಿ ಗಳಿಸಿ, ಕೈಗಾರಿಕಾ ಬೆಳವಣಿಗೆಯತ್ತ ಯಶಸ್ಸು ಪಡೆಯಬಹುದು. ಈ ಮೂಲಕ ಸ್ವಾವಲಂಭಿಗಳಾಗಿ ವಿಶ್ವದ ಎದುರು ವೈಭವದಿಂದ ದೇಶವನ್ನು ಮುನ್ನಡೆಸಬಹುದು ಎಂದು ಅಭಿಪ್ರಾಯಪಟ್ಟರು.
ರಾಷ್ಟಿçÃಯ ಸ್ವಯಂಸೇವಕ ಸಂಘ ಇಂದು ಶತಾಬ್ದಿ ಆಚರಿಸುತ್ತಿದೆ. ರಾಷ್ಟç ್ರಭಕ್ತಿ ಪರ, ಬ್ರಿಟಿಷ್ ಆಳ್ವಿಕೆ ವಿರುದ್ಧ ಹೋರಾಡಲು ಕೇಶವಜೀ ಅವರು ಸಂಘ ಸ್ಥಾಪಿಸಿ ಬ್ರಿಟಿಷ್ ದಾಸ್ಯದಿಂದ ನೊಂದವರನ್ನು ಹೊರತರಲು ಶ್ರಮಿಸಿದವರು ಎಂದರು.
ಸAಘವು ರಾಷ್ಟç ಹಿತ, ಬ್ರಿಟಿಷರ ಕಪಿಮುಷ್ಠಿಯಿಂದ ದೇಶದ ಜನರಿಗೆ ಸ್ವಾತಂತ್ರö್ಯ ಕೊಡಿಸಲು ಹೋರಾಡಿದೆ. ಇತ್ತೀಚಿನ ದಿನಗಳಲ್ಲಿ ಗಾಂಧಿ ಹೆಸರನ್ನು ಇಟ್ಟುಕೊಂಡಿರುವ ವ್ಯಕ್ತಿಗಳು ಗಾಂಧಿಯವರ ಸದ್ಗುಣಗಳನ್ನು ಅಳವಡಿಸಿಕೊಂಡಿಲ್ಲ. ಇದರ ಬದಲಾಗಿ ರಾಷ್ಟç ವಿರೋಧಿ ಹಾಗೂ ಸಂವಿಧಾನ ವಿರೋಧಿ ಮಾತುಗಳನ್ನು ಆಡುತ್ತ ಗಾಂಧಿಯವರ ಹೆಸರಿಗೆ ಮಸಿ ಬಳಿಯುವಂಥ ಕೆಲಸ ಮಾಡಲಾಗುತ್ತಿದೆ ಎಂದು ದೂರಿದರು.
ಮುಂದಾದರೂ ಗಾಂಧಿ ಹೆಸರಿನ ವ್ಯಕ್ತಿಗಳು, ಮಹಾತ್ಮ ಗಾಂಧಿಯAತೆ ದೇಶ ನಿಷ್ಠೆ, ಸ್ವದೇಶಿ ಬಳಕೆ ಸತ್ಯದ ಪ್ರತಿಪಾದನೆ ಹಾಗೂ ಅಹಿಂಸೆ ದಾರಿಯಲ್ಲಿ ನಡೆಯುವ ಜೊತೆಗೆ ಶಿವಾಜಿ ಮಹಾರಾಜ ಹಾಗೂ ರಣ ಪ್ರತಾಪ್ ಸಿಂಗ್ ಅವರಂತ ದೇಶಭಕ್ತಿಯನ್ನು ಮೈಗೂಡಿಸಿಕೊಂಡು ಸಜ್ಜನರಾಗಿ ಬಾಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ನಗರದ ಅಧ್ಯಕ್ಷ ಪುಷ್ಪರಾಜ್, ನಗರಸಭೆ ಉಪಾಧ್ಯಕ್ಷೆ ಲಲಿತಾ ರವಿನಾಯ್ಕ, ಜಿಲ್ಲಾ ವಕ್ತಾರ ಸಿ.ಎಚ್.ಲೋಕೇಶ್, ಮುಖಂಡರಾದ ನಾಗರಾಜ್, ಪ್ರದೀಪ್, ಕೌಶಿಕ್, ಜಯಪ್ರಕಾಶ್ ಮತ್ತಿತರಿದ್ದರು.