ಮೌನ, ಶಿವಪೂಜಾನುಷ್ಠಾನ ಮುಕ್ತಾಯ

Silence Shiv Pujanushtha ends
ಹೊರ್ತಿ ಸಮೀಪದ ಕನ್ನೂರು ಶ್ರೀಮಠದ ಕೃಷಿ ಭೂಮಿಯ ಶಿವಯೋಗಾನುಷ್ಠಾನ ಕುಟೀರದಲ್ಲಿ ನಾಗಠಾಣ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು ಆಶೀರ್ವಚನ ನೀಡಿದರು. ಶ್ರೀಕೃಷ್ಣ ಸಂಪಗಾಂವಕ ಮಹಾರಾಜರು, ಗುರುಶಾಂತ ಶಿವಾಚಾರ್ಯರು, ಗುರುಪಾದ ಶ್ರೀಗಳು ಇತರರಿದ್ದರು.
Published on

ಹೊರ್ತಿ: ಲೋಕಕಲ್ಯಾಣಕ್ಕಾಗಿ ಹಾಗೂ ಅಧಿಕ ಮಾಸದ ಶ್ರಾವಣ ಮಾಸದ 1 ತಿಂಗಳ ಹಾಗೂ ನಿಜ ಶ್ರಾವಣ ಮಾಸದ 9 ದಿನ ಜಪ, ತಪ, ಮೌನ ಹಾಗೂ ಶಿವಪೂಜೆ ಅನುಷ್ಠಾನವನ್ನು ಕನ್ನೂರು ಗುರುಮಠದ ಸೋಮನಾಥ ಶ್ರೀಗಳು ಕೈಗೊಂಡಿರುವುದು ಸ್ಮರಣೀಯ ಎಂದು ನಾಗಠಾಣ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಹೇಳಿದರು.

ಸಮೀಪದ ಕನ್ನೂರು ಶ್ರೀಮಠದ ಕೃಷಿ ಭೂಮಿಯ ಶಿವಯೋಗಾನುಷ್ಠಾನ ಕುಟೀರದಲ್ಲಿ ಸೋಮನಾಥ ಶ್ರೀಗಳು ಕೈಗೊಂಡಿದ್ದ ಮೌನ- ಶಿವ ಪೂಜಾನುಷ್ಠಾನ ಮುಕ್ತಾಯ, ಧರ್ಮ ಸಭೆಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಕನ್ನೂರು ಪ್ರಶಾಂತ ಕುಟೀರದ ಶ್ರೀಕೃಷ್ಣ ಸಂಪಗಾಂವಕ ಮಹಾರಾಜರು ಮಾತನಾಡಿ, ಗುರುವಿನ ಮಾರ್ಗದರ್ಶನ, ಉಪದೇಶ ಪಾಲಿಸುವ ಜತೆಗೆ ದೇವ ನಾಮಸ್ಮರಣೆ ಮಾಡಿದರೆ ಸುಂದರ ಜೀವನ ಕಂಡುಕೊಳ್ಳಲು ಸಾಧ್ಯ ಎಂದರು.

ಬೊಮ್ಮನಳ್ಳಿಯ ಗುರುಶಾಂತ ಶಿವಾಚಾರ್ಯ ಹಾಗೂ ಹತ್ತಳ್ಳಿಯ ಗುರುಪಾದ ಶಿವಾಚಾರ್ಯರು ಮಾತನಾಡಿದರು.

ಕನ್ನೂರು ಗುರುಮಠದ ಸೋಮನಾಥ ಶ್ರೀಗಳು ಮಾತನಾಡಿ, ಪರೋಪಕಾರ ಗುಣ ಹೊಂದಿ ಎಲ್ಲರಿಗೂ ಒಳ್ಳೆಯದನ್ನು ಬಯಸಬೇಕು. ಒಳ್ಳೆಯದನ್ನು ಮಾಡುವುದು ಆಗದಿದ್ದರೂ ಕೆಡುಕನ್ನು ಬಯಸಬಾರದು ಎಂದು ಹೇಳಿದರು.

ಕಾಂಗ್ರೆಸ್ ಹಿರಿಯ ಮುಖಂಡ, ವಿಜಯಪುರ ಬಂಜಾರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಿ.ಎಲ್.ಚವ್ಹಾಣ ಅವರು ಅನ್ನ ಪ್ರಸಾದ ವ್ಯವಸ್ಥೆ ಕಲ್ಪಿಸಿದ್ದರು.
ಚಿಮ್ಮಲಗಿಯ ಸಿದ್ಧನಂದೇಶ ಶಿವಾಚಾರ್ಯರು, ಕನ್ನೂರು ಗಿರಮಲ್ಲಯ್ಯ ಮಹಾರಾಜರು, ಹಂಜಗಿಯ ಶಾಸ್ತ್ರಿಗಳು ಮಾತನಾಡಿದರು. ಶಾಸಕ ವಿಠಲ ಕಟಕಧೋಂಡ, ಕಾಂಗ್ರೆಸ್ ಹಿರಿಯ ಮುಖಂಡ ಡಿ.ಎಲ್.ಚವ್ಹಾಣ, ಈರಪ್ಪ ಬೆಳ್ಳುಂಡಗಿ, ಬಸುಗೌಡ ಪಾಟೀಲ, ಶಿವನಗೌಡ ಪಾಟೀಲ, ನಾನಾಗೌಡ ಪಾಟೀಲ, ಧರೆಪ್ಪ ಉಪ್ಪಾರ, ವಾಸು ಮೇತ್ರಿ, ಮಲಕು ಉಪ್ಪಾರ, ಶಿಕ್ಷಕ ಬಸವರಾಜ ಮೇತ್ರಿ, ಶಿಕ್ಷಕ ಬಸವರಾಜ ಮೇತ್ರಿ ಇತರರಿದ್ದರು. ಶಿಕ್ಷಕ ಆರ್.ಪಿ.ಬೋಗಾರ ನಿರೂಪಿಸಿದರು. ಎಸ್.ಎಸ್.ಡೊಳ್ಳಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net