ಮೌನ ಪ್ರತಿಭಟನೆ ನಾಳೆ

Published on

ಕುಷ್ಟಗಿ: ಸಿಇಟಿ ಪರೀಕ್ಷೆಯಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತಗೆಯಿಸಿರುವ ಪ್ರಕರಣವನ್ನು ಖಂಡಿಸಿ ಜನಿವಾರ ಧರಿಸುವ ಎಲ್ಲ ಸಮುದಾಯದವರು ಏ.29ರಂದು ಪಟ್ಟಣದಲ್ಲಿ ಮೌನ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದೇವೆ ಎಂದು ಪುರಸಭೆ ಸದಸ್ಯ ಜೆ.ಜಿ.ಆಚಾರ್ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬ್ರಾಹ್ಮಣ ಸಮುದಾಯ ಸೇರಿದಂತೆ ಆರ್ಯವೈಶ್ಯ, ಸೂರ್ಯವಂಶ ಕ್ಷತ್ರೀಯ, ಭಾವಸಾರ ಕ್ಷತ್ರೀಯ, ಸೋಮವಂಶ ಸಹಸ್ರಾರ್ಜುನ, ಆರ್ಯ ಈಡಿಗ, ವಿಶ್ವಕರ್ಮ, ಯಾದವ, ರಜಪೂತ ಇನ್ನಿತರ ಜನಿವಾರ ಧರಿಸುವ ಸಮುದಾಯದವರೆಲ್ಲರೂ ಪ್ರತಿಭಟನೆಯಲ್ಲಿ ಪಾಲ್ಗೊಂಡು ಜನಿವಾರ ತೆಗೆಯಿಸಿರುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಗುವುದು ಎಂದರು.

ಬ್ರಾಹ್ಮಣ ಸಮುದಾಯದ ಅಧ್ಯಕ್ಷ ತಿಮ್ಮಪ್ಪಯ್ಯ ದೇಸಾಯಿ, ಪ್ರಮುಖರಾದ ಟಿ.ಬಿ.ದೇಸಾಯಿ, ಅಮರೇಶ ಶೆಟ್ಟರ್, ಅಭಿನಂದನ್, ಪಾಂಡಪ್ಪ ಗೋಂದಳೆ, ಕೃಷ್ಣಪ್ಪ ಪತ್ತಾರ, ಎಸ್.ಎನ್.ಘೋರ್ಪಡೆ, ಗುರಪ್ಪ ಬಡಿಗೇರ, ಮಾನಪ್ಪ ಕಮ್ಮಾರ, ರಾಘವೇಂದ್ರದಾಸ್, ಸಂಪತ್ ಜೈನ್, ಸಿದ್ದಪ್ಪ ಬಡಿಗೇರ, ರಾಜು ಗಂಗನಾಳ, ಕೃಷ್ಣಾರಾವ್ರ, ಭೀಮಸೇನ್ ಹಂಜಕ್ಕಿ, ಜಯತೀರ್ಥ ಸೌದಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net