ಮೌಢ್ಯ, ಕಂದಚಾರದಿಂದ ಮುಕ್ತರಾದರೆ ನೆಮ್ಮದಿ

18-kkr3
Published on

ಕಿಕ್ಕೇರಿ: ಮಾನವನ ಬದುಕಿಗೆ ಪೆಡಂಭೂತವಾಗಿ ಕಾಡುತ್ತಿರುವ ಮೌಢ್ಯ, ಕಂದಾಚಾರದಿಂದ ಮುಕ್ತರಾದಲ್ಲಿ ಬದುಕು ನೆಮ್ಮದಿಯಾಗಲಿದೆ ಎಂದು ಸಮಾಜ ಸೇವಕ ಆರ್‌ಟಿಒ ಮಲ್ಲಿಕಾರ್ಜುನ್ ಅಭಿಪ್ರಾಯಪಟ್ಟರು.


ಸಮೀಪದ ಬೆಡದಹಳ್ಳಿಯ ಪಂಚಭೂತೇಶ್ವರ ದೇಗುಲದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ‘ಮೌಢ್ಯ-ಕಂದಾಚಾರದಿಂದ ಮುಕ್ತರಾಗಿ’ ಕಾರ್ಯಕ್ರಮದಲ್ಲಿ ಮಾತನಾಡಿ, ಕ್ಷಣಿಕ ಆಸೆಗೆ ಮಾನವ ಯತ್ನವಿಲ್ಲದೆ ಕೇವಲ ಮೌಢ್ಯ, ಕಂದಚಾರಗಳಿಂದ ಕಾರ್ಯಸಿದ್ಧಿಯಾಗಲಿದೆ ಎನ್ನುವುದು ತಪ್ಪು. ಬಸವಣ್ಣನವರಂತೆ ಕಾಯಕವೇ ಕೈಲಾಸ ಎಂದಾಗ ಮಾತ್ರ ನೆಮ್ಮದಿಯ ಬದುಕು ಸಾಧ್ಯ ಎಂದರು.


ಮಳವಳ್ಳಿಯ ಸಿದ್ದರಾಮೇಶ್ವರ ಪುಣ್ಯ ಪೀಠದ ಮಾದೇಶ್ ಗುರೂಜಿ ಆರ್ಶೀವಚನ ನೀಡಿ, ಅಕ್ಷರ ಅಮಾವ್ಯಾಸೆಯಂದು ಮಠದಲ್ಲಿ ಪ್ರತಿ ತಿಂಗಳು ನಡೆಯುವ ಕಾರ್ಯಕ್ರಮ ಭಕ್ತರಲ್ಲಿ ಧಾರ್ಮಿಕ ಜಾಗೃತಿ ಜತೆಗೆ ಮೌಢ್ಯ, ಮಾಟ, ಮಂತ್ರ ಎನ್ನುವ ಕಲ್ಪನೆ ದೂರ ಮಾಡಲಿದೆ. ಶುದ್ಧತೆಯಿಂದ ಜ್ಞಾನದಿಂದ ಬದುಕು ಎಂದರೆ ಸುಂದರ ಜೀವನ ಕಟ್ಟಿಕೊಳ್ಳಬಹುದು ಎಂದು ತಿಳಿಸಿದರು.


ಪಂಚಭೂತೇಶ್ವರ, ಪಾರ್ವತಿದೇವಿಗೆ ಪಂಚಾಮೃತ ಅಭಿಷೇಕ, ಗೋಪೂಜೆ, ವಿವಿಧ ಅಲಂಕಾರ, ಮಹಾಮಂಗಳಾರತಿ, ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

ಎಎಸ್‌ಐ ಸೋಮಶೇಖರ್, ಪಂಚಭೂತೇಶ್ವರ ಪೀಠಾಧ್ಯಕ್ಷ ರುದ್ರಮುನಿ ಸ್ವಾಮೀಜಿ, ಬಿಜೆಪಿ ಮುಖಂಡ ಕೆ.ಆರ್.ನೀಲಕಂಠ, ಕಾರ್ಯದರ್ಶಿ ಕಾಂತರಾಜು, ಶಿವಲಿಂಗೇಗೌಡ, ಚನ್ನೇಗೌಡ, ಮಧು, ಮಹೇಶ್, ಕಡಮೆಣಸು ಚಂದ್ರು ಇತರುದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net