ಮೋಳೆದೊಡ್ಡಿಗೆ ಅಧಿಕಾರಿಗಳ ದಾಂಗುಡಿ : ವಿಜಯವಾಣಿ ವರದಿಗೆ ತಾಲೂಕು ಆಡಳಿತದ ಸ್ಪಂದನೆ

1
Published on

ಚನ್ನಪಟ್ಟಣ: ತಾಲೂಕಿನ ಮೋಳೆದೊಡ್ಡಿ ಗ್ರಾಮಕ್ಕೆ ಅಧಿಕಾರಿಗಳ ತಂಡದೊಂದಿಗೆ ಮಂಗಳವಾರ ಭೇಟಿ ನೀಡಿದ ತಹಸೀಲ್ದಾರ್ ಎಲ್. ನಾಗೇಶ್ ಗ್ರಾಮದ ಸಮಸ್ಯೆಗಳನ್ನು ಆಲಿಸಿದರು.

ನಗರದಿಂದ ಕೇವಲ ಐದು ಕಿಮೀ ದೂರವಿರುವ ಹಿಂದುಳಿದ ಸಮುದಾಯವೇ ಗಣನೀಯವಾಗಿ ವಾಸವಿರುವ ಈ ಗ್ರಾಮದ ಸಮಸ್ಯೆಗಳ ಬಗ್ಗೆ ವಿಜಯವಾಣಿ 15ರ ಸಂಚಿಕೆಯಲ್ಲಿ ‘ಗ್ರಾಮ ದೊಡ್ಡದು, ಸಮಸ್ಯೆಗಳೂ ಹೆಚ್ಚು’ ಶೀರ್ಷಿಕೆಯಡಿ ಸವಿಸ್ತಾರವಾಗಿ ವರದಿ ಪ್ರಕಟಿಸಿತ್ತು. ಈ ವರದಿಯನ್ನು ಗಮನಿಸಿದ ಕೂಡಲೇ ತಹಸೀಲ್ದಾರ್ ಎಲ್, ನಾಗೇಶ್ , ಶಿಕ್ಷಣ, ಕಂದಾಯ ಇಲಾಖೆ ಹಾಗೂ ಗ್ರಾಪಂ ಅಧಿಕಾರಿಗಳ ಜತೆಗೂಡಿ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆಗಳನ್ನು ಖುದ್ದು ವೀಕ್ಷಿಸಿದರು.

ಶಾಲೆ ಜಾಗ ಹದ್ದುಬಸ್ತು ಗುರುತಿಸಲು ಸೂಚನೆ: ಗ್ರಾಮದ ಶಾಲೆಯ ಸಮಸ್ಯೆಗೆ ಹೆಚ್ಚಿನ ಒತ್ತು ನೀಡಿದ ತಹಸೀಲ್ದಾರ್ ನಾಗೇಶ್, ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು. ಶಾಲಾ ಮೈದಾನಕ್ಕೆ ಭದ್ರತೆ ಇಲ್ಲದಿರುವುದು, ಶಾಲೆಯ ಜಾಗ ಒತ್ತುವರಿ ಹಾಗೂ ಆಟದ ಮೈದಾನದ ಒಂದು ಬದಿಯಲ್ಲಿರುವ ಬೃಹತ್ ಕೊಳಚೆ ನೀರಿನ ಗುಂಡಿಯನ್ನು ವೀಕ್ಷಿಸಿ ಶಿಕ್ಷಕರು ಹಾಗೂ ಗ್ರಾಮದ ಮುಖಂಡರಿಂದ ವಾಹಿತಿ ಸಂಗ್ರಹಿಸಿದರು. ತಕ್ಷಣವೇ ಸರ್ವೇ ಇಲಾಖೆ ಅಧಿಕಾರಿಗಳಿಗೆ ದೂರವಾಣಿ ಮಾಡಿ ಬುಧವಾರದಿಂದಲೇ ಈ ಜಾಗದ ಸರ್ವೇ ನಡೆಸಿ, ಶಾಲೆ ಹಾಗೂ ಕಟ್ಟೆಯ ಹದ್ದುಬಸ್ತು ಗುರುತಿಸಿ ವರದಿ ನೀಡುವಂತೆ ಸೂಚಿಸಿದರು. ಗ್ರಾಮದ ಚರಂಡಿ ನೀರು ಹರಿದು ಬಂದು ಗುಂಡಿ ಸೇರುವುದನ್ನು ಗಮನಿಸಿದ ಅವರು, ಕೂಡಲೇ ಚರಂಡಿ ನೀರು ಬೇರೆಡೆ ಹರಿಯಲು ಕ್ರಮ ಕೈಗೊಳ್ಳಲಾಗುವುದು. ಸರ್ವೇ ಕಾರ್ಯ ಮುಗಿದ ಕೂಡಲೇ ಶಾಲೆಯ ಮೈದಾನದ ಜಾಗಕ್ಕೆ ಭದ್ರತಾ ವ್ಯವಸ್ಥೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಕಟ್ಟೆಯ ಜಾಗಕ್ಕೆ ಬೇಲಿ ನಿರ್ಮಿಸಿಕೊಳ್ಳುವಂತೆ ಗ್ರಾಪಂ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಲಜೀವನ್ ಯೋಜನೆಗೆ ಸಭೆ:  ಗ್ರಾಮದ ಮನೆಗಳಿಗೆ ಪ್ರತ್ಯೇಕ ನಳ ಸಂಪರ್ಕವಿಲ್ಲದಿರುವುದು ಹಾಗೂ ಜನತೆ ನೀರಿಗಾಗಿ ತೊಂಬೆಗಳನ್ನು ಆಶ್ರಯಿಸಿರುವುದಕ್ಕೆ ಬೇಸರ ವ್ಯಕ್ತಪಡಿಸಿದ ನಾಗೇಶ್, ಜಲಜೀವನ್ ಮಿಷನ್ (ಜೆಜೆಎಂ) ಕಾಮಗಾರಿ ಪ್ರಗತಿ ಬಗ್ಗೆ ವಾಹಿತಿ ಕಲೆಹಾಕಿದರು. ಕೇವಲ ಪೈಪ್‌ಗಳನ್ನು ಹಾಕಲಾಗಿದೆ. ಆದರೆ, ಯೋಜನೆ ಪೂರ್ಣಗೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು. ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಜೆಜೆಎಂ ಯೋಜನೆಗೆ ಸಂಬಂಧಪಟ್ಟ ಅಧಿಕಾರಿಗಳ ಜತೆ ಸಭೆ ಆಯೋಜಿಸುವಂತೆ ತಾಪಂ ಇಒ ಚಂದ್ರು ಅವರಿಗೆ ದೂರವಾಣಿ ಮೂಲಕ ಮನವಿ ವಾಡಿದರು.

ಅಧಿಕಾರಿಗಳ ಭೇಟಿಯ ವೇಳೆ ಗ್ರಾಮದಲ್ಲಿರುವ ಮನೆ ಹಾಗೂ ನಿವೇಶನ ರಹಿತರ ವಿಚಾರ, ಸ್ಮಶಾನ ಇಲ್ಲದಿರುವುದು ಹಾಗೂ ವಿವಿಧ ಸೌಲಭ್ಯಗಳನ್ನು ಕಲ್ಪಿಸುವುದು ಸೇರಿ ಹಲವು ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಗಮನ ಸೆಳೆಯಲಾಯಿತು.

ಗ್ರಾಮದ ಸಮಸ್ಯೆಗಳನ್ನು ಈಗಾಗಲೇ ಪಟ್ಟಿ ವಾಡಲಾಗಿದೆ. ಗ್ರಾಮದ ಅಭಿವೃದ್ಧಿಗೆ ಬೇಕಾದ ಸಹಕಾರ ನೀಡಲಾಗುವುದು. ಗ್ರಾಮದ ಸರಹದ್ದಿನಲ್ಲಿ ಲಭ್ಯವಿರುವ ಸರ್ಕಾರಿ ಜಾಗ ಗುರುತಿಸಿ, ಸ್ಮಶಾನ ಹಾಗೂ ನಿವೇಶನಗಳಿಗೆ ಬೇಕಾದ ಕ್ರಮ ಕೈಗೊಳ್ಳಲಾಗುವುದು. ಬೆಸ್ತ ಸಮುದಾಯವೇ ಪೂರ್ಣ ಪ್ರವಾಣದಲ್ಲಿರುವ ಈ ಗ್ರಾಮಕ್ಕೆ ಮೀನುಗಾರಿಕೆ ಇಲಾಖೆಯಿಂದ ಕೈಗೊಳ್ಳಬಹುದಾದ ಕಾರ್ಯಕ್ರಮಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚಿಸಲಾಗುವುದು. ಒಟ್ಟಾರೆ ತುರ್ತಾಗಿ ಆಗಬೇಕಿರುವ ಕೆಲಸಗಳನ್ನು ಶ್ರೀವಾಗಿ ವಾಡಿಸಿಕೊಡಲಾಗುವುದು ಎಂದು ತಹಸೀಲ್ದಾರ್ ನಾಗೇಶ್ ಭರವಸೆ ನೀಡಿದರು.

ಬಿಇಒ ಮರೀಗೌಡ, ಗೇಡ್ 2 ತಹಸೀಲ್ದಾರ್ ಲಕ್ಷ್ಮೀದೇವಮ್ಮ, ಉಪ ತಹಸೀಲ್ದಾರ್ ಹರೀಶ್‌ಕುವಾರ್, ಕಂದಾಯ ನಿರೀಕ್ಷಕ ಯುವರಾಜ್, ಗ್ರಾಮ ಲೆಕ್ಕಾಧಿಕಾರಿ ಶಿವು, ನೀಲಸಂದ್ರ ಗ್ರಾಪಂ ಅಧ್ಯಕ್ಷೆ ಲಿಂಗಮ್ಮ, ಗ್ರಾಪಂ ಸದಸ್ಯರಾದ ಬಿಳಿಯಪ್ಪ, ಚಂದ್ರನಾಥ್, ವಾಜಿ ಉಪಾಧ್ಯಕ್ಷ ಯಧುಕುವಾರ್, ಪಿಡಿಒ ವಾದೇಗೌಡ, ಮುಖ್ಯಶಿಕ್ಷಕಿ ಮಂಗಳಮ್ಮ, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ವೀರಾಜ್, ಅಕ್ಷರ ಬೆಳಕು ಸಂಯೋಜಕ ಶಿವಕುವಾರ್ ಹಾಗೂ ಗ್ರಾಪಂ ಸಿಬ್ಬಂದಿ ಉಪಸ್ಥಿತರಿದ್ದರು.

ವಿಜಯವಾಣಿ ಪತ್ರಿಕೆಯ ವರದಿಯ ಹಿನ್ನೆಲೆಯಲ್ಲಿ ಗ್ರಾಮದ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಕ್ಷೇತ್ರದ ಶಾಸಕರು ವಾಹಿತಿ ಪಡೆದುಕೊಂಡಿದ್ದಾರೆ. ಗ್ರಾಮದ ಸಮಸ್ಯೆಗಳನ್ನು ಪರಿಶೀಲಿಸಲು ಗ್ರಾಮಕ್ಕೆ ಭೇಟಿ ನೀಡಲಾಗಿದೆ. ಶಾಲೆಯ ಜಾಗವನ್ನು ಸರ್ವೇ ವಾಡಲು ಸೂಚಿಸಿದ್ದೇನೆ. ಕುಡಿಯುವ ನೀರು ಹಾಗೂ ಗ್ರಾಮದ ಇನ್ನಿತರ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು. ಎಲ್.ನಾಗೇಶ್, ತಹಸೀಲ್ದಾರ್ ಗ್ರಾಮದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದ ವಿಜಯವಾಣಿ ಪತ್ರಿಕೆಗೆ ಗ್ರಾಮಸ್ಥರ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ. ವರದಿಯನ್ನು ಗಮನಿಸಿರುವ ಕ್ಷೇತ್ರದ ಶಾಸಕ ಕುವಾರಸ್ವಾಮಿ ಸಹ ಗ್ರಾಮದ ಸಮಸ್ಯೆಗಳ ಬಗ್ಗೆ ದೂರವಾಣಿ ಮೂಲಕ ಚರ್ಚಿಸಿದ್ದಾರೆ. ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿದೆ. ಗ್ರಾಮದಲ್ಲಿ ಹಿಂದುಳಿದ ಸಮುದಾಯದ 3000ಕ್ಕೂ ಹೆಚ್ಚಿನ ಜನ ವಾಸಿಸುತ್ತಿದ್ದು, ಜಿಲ್ಲಾಡಳಿತ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಂಡರೆ ಜನತೆಯ ಸಂಕಷ್ಟ ಬಗೆಹರಿಯುತ್ತದೆ. ಬಿಳಿಯಪ್ಪ, ಗ್ರಾಪಂ ಸದಸ್ಯ ಮೋಳೆದೊಡ್ಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net