

ಹಗರಿಬೊಮ್ಮನಹಳ್ಳಿ: ಮೋರಗೆರೆ ಗ್ರಾಮದಲ್ಲಿ ಶ್ರೀ ದುರುಗಮ್ಮ ದೇವಿ ಜಾತ್ರಾ ಮಹೋತ್ಸವ ಬುಧವಾರ ಅದ್ದೂರಿಯಾಗಿ ನಡೆಯಿತು.
ಶ್ರೀ ದುರುಗಮ್ಮ ದೇಗುಲದಿಂದ ಊರಮ್ಮ ದೇವಿ ಮೆರವಣಿಗೆ ನಡೆಯಿತು. ಮರಡಿಯ ಮೇಲಿರುವ ದೇಗುಲದಲ್ಲಿ ಮಧ್ಯಾಹ್ನದಿಂದ ಸಂಜೆವರೆಗೆ ಸಾಂಪ್ರಾದಾಯಿಕ ಕಾರ್ಯಕ್ರಮಗಳು ನಡೆದವು. ಸಂಜೆ 6ಗಂಟೆಗೆ ಊರೊಳಗೆ ದೇವಿ ಮೂರ್ತಿ ಮೆರವಣಿಗೆ ನಡೆಯಿತು. ದೈವಸ್ಥರಾದ ಹಿರೇಗೌಡ್ರ ಶಂಕರಗೌಡ್ರು, ಪಂಪಾಪತಿ ಆಚಾರಿ, ತುಪ್ಪದ ಕೊಟ್ರೇಶಪ್ಪ ಬಣಕಾರ, ಹಳ್ಳಿ ಬಸವರಾಜ, ಕಬ್ಬಜ್ಜಿ ಪೋರಪ್ಪ, ಬಾವಿ ವಿಜಯಾನಂದ, ಮೇಟಿ ಹೇಮಪ್ಪ ಇತರರಿದ್ದರು.