ಮೋದಿಯೇ ಮತ್ತೊಮ್ಮೆ ದೇಶದ ಪ್ರಧಾನಿಯಾಗಲಿ

17.2
ಹೊಳೆನರಸೀಪುರ ತಾಲೂಕು ಬಿಜೆಪಿ ಮುಖಂಡರು ಭಾನುವಾರ ಇಲ್ಲಿನ ಗಾಂಧಿ ವೃತ್ತದಲ್ಲಿ ಪ್ರಧಾನಿ ನರೇಂದ್ರ ಮೋದಿ ಜನ್ಮದಿನಾಚರಣೆ ಅಂಗವಾಗಿ ಮೋದಿ ಅವರ ಕಟೌಟ್‌ಗೆ ಹಾಲಿನ ಅಭಿಷೇಕ ಮಾಡಿ ಸಿಹಿ ಹಂಚಿದರು. ಮಳಲಿ ನಾರಾಯಣ್, ಎಂ.ಎನ್.ರಾಜು, ಮೋಹನ್ ಇತರರು ಇದ್ದರು.
Published on

ಹೊಳೆನರಸೀಪುರ: ನರೇಂದ್ರ ಮೋದಿ ಅವರು ಭಾರತದ ಪ್ರಧಾನಿ ಆದ ನಂತರ ದೇಶ ಈ ಹಿಂದಿನ 65 ವರ್ಷದಲ್ಲಿ ಕಾಣದಷ್ಟು ಪ್ರಗತಿ ಕಂಡಿದ್ದು ಪ್ರಪಂಚದ ಎಲ್ಲ ದೇಶಗಳು ಭಾರತದತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಆದ್ದರಿಂದ ಮುಂದಿನ ಚುನಾವಣೆಯಲ್ಲೂ ಮೋದಿಯೇ ಗೆದ್ದು ಮತ್ತೊಮ್ಮೆ ದೇಶದ ಪ್ರಧಾನಿ ಆಗಲಿ ಎಂದು ಮಂಡಲ ಅಧ್ಯಕ್ಷ ಮಳಲಿ ನಾರಾಯಣ್ ಆಶಿಸಿದರು.

ಭಾನುವಾರ ನರೇಂದ್ರ ಮೋದಿ ಅವರ 73ನೇ ಜನ್ಮದಿನಾಚರಣೆ ಅಂಗವಾಗಿ ಇಲ್ಲಿನ ಗಾಂಧಿ ವೃತ್ತದಲ್ಲಿ ಗಾಂಧಿ ಪ್ರತಿಮೆಗೆ ಹಾರ ಹಾಕಿ, ಮೋದಿ ಅವರ ಕಟೌಟ್‌ಗೆ ಹಾಲಿನ ಅಭಿಷೇಕ ಮಾಡಿ ಮಾತನಾಡಿ, ಪ್ರಧಾನಿ ಮೇದಿ ಅವರ ಜನ್ಮದಿನದ ಅಂಗವಾಗಿ ಅ. 2ರ ಗಾಂಧಿ ಜಯಂತಿವರೆಗೆ ವಿವಿಧ ಸೇವಾ ಕಾರ್ಯಗಳನ್ನು ಹಮ್ಮಿಕೊಂಡಿದ್ದೇವೆ. ರಕ್ತದಾನ ಶಿಬಿರ, ಆರೋಗ್ಯ ಶಿಬಿರ, ಸಸಿ ನೆಡುವ ಕಾರ್ಯಕ್ರಮ, ದೇವಾಲಯಗಳ ಸ್ವಚ್ಛತಾ ಕಾರ್ಯಕ್ರಮಗಳನ್ನು ನಡೆಸುತ್ತೇವೆ ಎಂದರು.

ಜಿಲ್ಲಾ ಸಮಿತಿಯ ಎಂ.ಎನ್.ರಾಜು ಮಾತನಾಡಿ, ನರೇಂದ್ರ ಮೋದಿ ಅವರು ದೇಶ ಕಂಡ ಅತ್ಯುತ್ತಮ ಪ್ರಧಾನಿ. ಅವರು ಗುಜರಾತ್ ಮುಖ್ಯಮಂತ್ರಿ ಆಗಿ, ಎರಡು ಅವಧಿಗೆ ಪ್ರಧಾನಿ ಆಗಿದ್ದರೂ ಒಂದೇ ಒಂದು ಭ್ರಷ್ಟಾಚಾರ ಪ್ರಕರಣದಲ್ಲಿ ಭಾಗಿ ಆಗಿಲ್ಲ. ಅವರ ವಂಶದವರನ್ನು ರಾಜಕೀಯಕ್ಕೆ ತಂದಿಲ್ಲ. ಆಸ್ತಿ ಮಾಡಿಲ್ಲ. ಇಂತಹ ಸ್ವಚ್ಛ ಪ್ರಧಾನಿಯನ್ನು ನಾವು ಮತ್ತೊಮ್ಮೆ ಆರಿಸೋಣ ಎಂದರು.

ಮಂಡಲ್ ಕಾಯದರ್ಶಿ ಮೋಹನ್, ಕಿಸಾನ್ ಘಟಕದ ಬಿ.ಎಂ.ಚಂದ್ರಶೇಖರ್, ಯುವ ಘಟಕದ ಕೀರ್ತನ್, ನಾಗೇಶ್, ಮಂಜೇಗೌಡ, ಲಕ್ಷ್ಮಣ, ಅಜಯ್, ಪ್ರಮೋದ್ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net