ಮೋದಿ ಸೋತರೇ ದೇಶಕ್ಕೆ ಕಂಟಕ

CTD 12 Namo Bharatha 1
Published on

ಚಿತ್ರದುರ್ಗ: ಪ್ರಧಾನಿ ನರೇಂದ್ರ ಮೋದಿ ಅವರಿಂದ ಭಾರತ ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸೋಲಿಸಿದರೆ, ಪ್ರಗತಿ ಕುಂಠಿತವಾಗಿ ದೇಶ ಮುಳುಗಲಿದೆ ಎಂದು ನಮೋ ಬ್ರಿಗೇಡ್‌ನ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ತರಾಸು ರಂಗಮಂದಿರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ನಮೋ ಭಾರತ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿ, ಲಷ್ಕರೆ ತೊಯಿಬಾನೆ, ಹಮಾಸ ಉಗ್ರ, ಮತ್ತಿನ್ಯಾವ ಭಯೋತ್ಪಾದಕರಾಗಲಿ ದೆಹಲಿಯಲ್ಲ, ಕಾಶ್ಮೀರದಲ್ಲೂ 10 ವರ್ಷದಿಂದ ದಾಳಿ ಮಾಡಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಮೋದಿ ಕಾರಣ ಎಂದರು.

ಪ್ರಧಾನಿ ಆದವರ ಪೈಕಿ ಮನಮೋಹನ್ ಸಿಂಗ್ ಅವರಿಗಿಂತಲೂ ಹೆಚ್ಚು ವಿದೇಶ ಪ್ರಯಾಣ ಮೋದಿ ಮಾಡಿದ್ದಾರೆ. ಆದರೆ, ಖರ್ಚು ಕಡಿಮೆಯಾಗಿದೆ. ಇದು ಹೇಗೆ ಸಾಧ್ಯ. ಜನರ ದುಡ್ಡು ದುರುಪಯೋಗ ಮಾಡುವ ವ್ಯಕ್ತಿಯಲ್ಲ ಎಂದು ತಿಳಿಸಿದರು.
ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net