ಮೋದಿ ಸರ್ಕಾರದ ಸಾಧನೆಗಳ ಕರಪತ್ರ ವಿತರಣೆ

city bjp
Published on

ಬೀದರ್: ನರೇಂದ್ರ ಮೋದಿ ಸರ್ಕಾರಕ್ಕೆ 8 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಬಿಜೆಪಿ ಬೀದರ್ ನಗರ ಘಟಕದಿಂದ ಶನಿವಾರ ನಗರದಲ್ಲಿ ಸರ್ಕಾರದ ಸಾಧನೆಗಳ ಕರಪತ್ರವನ್ನು ಮನೆ ಮನೆಗೆ ತೆರಳಿ ವಿತರಿಸಲಾಯಿತು.

ಕರಪತ್ರ ವಿತರಣೆಗೆ ಚಾಲನೆ ನೀಡಿದ ಬೀದರ್ ನಗರಾಭಿವೃದ್ಧಿ ಪ್ರಾಕಾರ ಅಧ್ಯಕ್ಷ ಬಾಬು ವಾಲಿ ಮಾತನಾಡಿ, ಮೋದಿ ಸರ್ಕಾರ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಇವುಗಳ ಲಾಭವನ್ನು ಅರ್ಹರಿಗೆ ಮುಟ್ಟಿಸುವ ಕೆಲಸ ಕಾರ್ಯಕರ್ತರು ಮಾಡಬೇಕು ಎಂದು ಸಲಹೆ ನೀಡಿದರು.

ಬಿಜೆಪಿ ನಗರ ಘಟಕ ಅಧ್ಯಕ್ಷ ಶಶಿ ಹೊಸಳ್ಳಿ ಮಾತನಾಡಿ, ಸರ್ಕಾರದ ವಿವಿಧ ಯೋಜನೆಗಳ ಮಾಹಿತಿ ಒಳಗೊಂಡ ಕರಪತ್ರವನ್ನು ನಗರದ ಪ್ರತಿ ಮನೆಗೆ ಮುಟ್ಟಿಸುವ ನಿಟ್ಟಿನಲ್ಲಿ ತಂಡಗಳನ್ನು ರಚಿಸಲಾಗಿದೆ ಎಂದರು.

ನಗರ ಘಟಕ ಪ್ರಧಾನ ಕಾರ್ಯದರ್ಶಿ ಸುಭಾಷ ಮಡಿವಾಳ, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ರಾಜು ನೇಳಗೆ, ರೇವಣಸಿದ್ದಪ್ಪ ಜಲಾದೆ, ಗಣೇಶ ಭೋಸ್ಲೆ, ಸಂಜು ಪಾಟೀಲ್, ಸುನೀಲ ಗೌಳಿ, ಬಸವರಾಜ ಮಲ್ಕಪ್ಪನೋರ್, ನವೀನ್ ಚಿಟ್ಟಾ, ಸೂರ್ಯಕಾಂತ ರಾಮಶೆಟ್ಟಿ, ಸಚ್ಚಿದಾನಂದ ಚಿದ್ರೆ, ಕಾಶೀನಾಥ ವಿಶ್ವಕರ್ಮ, ಸಂಜುಕುಮಾರ ಪಾಟೀಲ್, ರೋಷನ್ ವರ್ಮಾ, ರಾಜು ಬಿರಾದಾರ್, ನಿತೀನ್ ನವಲಕಲೆ, ಕೈಲಾಶ ಕಾಜಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net