ಮೋದಿ ಮತ್ತೊಮ್ಮೆ ಅಭಿಯಾನ

Preethamgowda
Published on

ಚಿತ್ರದುರ್ಗ: ದೇಶದಲ್ಲಿ ಬಿಜೆಪಿ ಚುನಾವಣೆ ತಯಾರಿಯಲ್ಲಿ ಮುಂಚೂಣಿಯಲ್ಲಿದೆ. ಪ್ರಧಾನಿ ನರೇಂದ್ರಮೋದಿ ಅವರ 10 ವರ್ಷದ ಆಡಳಿತದಿಂದಾಗಿ ಭಾರತ ವಿಶ್ವಗುರು ಆಗುವಲ್ಲಿ ಮುನ್ನ್ನುಡಿ ಇಟ್ಟಿದೆ. ಅದನ್ನು ಸಾಕಾರಗೊಳಿಸಲು ಮೋದಿ ಮತ್ತೊಮ್ಮೆ ಅಭಿಯಾನ ಮುಂದುವರೆದಿದೆ ಎಂದು ಹಾಸನ ಮಾಜಿ ಶಾಸಕ ಪ್ರೀತಂಗೌಡ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾ. 10ರೊಳಗೆ ಪಕ್ಷದ ರಾಷ್ಟ್ರೀಯ ನಾಯಕರು ಚಿತ್ರದುರ್ಗ, ದಾವಣಗೆರೆ, ತುಮಕೂರಿಗೆ ಭೇಟಿ ನೀಡುವ ಸಾಧ್ಯತೆ ಇದೆ. ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಈಗಾಗಲೇ 10ಸಾವಿರ ಕಾರ್ಯಕರ್ತರು ಸಕ್ರಿಯರಾಗಿ ಕೆಲಸ ಮಾಡುತ್ತಿದ್ದಾರೆ. ವಿರೋಧಿ ಬಣವನ್ನು ಸಮರ್ಥವಾಗಿ ಎದುರಿಸಿ ರಾಜ್ಯದಲ್ಲೂ 28 ಕ್ಷೇತ್ರ ಗೆಲ್ಲಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net