ಮೋದಿ ನೇತೃತ್ವದಲ್ಲಿ ದೇಶ ಅಭಿವೃದ್ಧಿ

6HRG1
ಹಾರೂಗೇರಿಯಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಸಮಾವೇಶವನ್ನು ಗಣ್ಯರು ಉದ್ಘಾಟಿಸಿದರು. ಸಚಿವ ಮುರುಗೇಶ ನಿರಾಣಿ, ಶಾಸಕರಾದ ಪಿ.ರಾಜೀವ, ಸಿದ್ದು ಸವದಿ, ಡಿ.ಎಂ.ಐಹೊಳೆ, ಡಾ. ರಾಜೇಶ ನೇರ್ಲಿ, ಅರುಣ ಶಹಾಪೂರ ಇತರರಿದ್ದರು.
Published on

ಹಾರೂಗೇರಿ: ಕಾಂಗ್ರೆಸ್‌ನ 60 ವರ್ಷದ ಆಳ್ವಿಕೆಯಲ್ಲಿ ದೇಶದ ಪ್ರಗತಿ ಮರೀಚಿಕೆಯಾಗಿತ್ತು. ಆದರೆ, ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶದ ಚುಕ್ಕಾಣಿ ಹಿಡಿದ ಮೇಲೆ ದೇಶ ಪ್ರಗತಿಯತ್ತ ಸಾಗುತ್ತಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಹೇಳಿದರು.

ಪಟ್ಟಣದ ಪುರಸಭೆ ಕಾರ್ಯಾಲಯದ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬಿಜೆಪಿ ಪಕ್ಷದ ವಿಜಯ ಸಂಕಲ್ಪ ರಥಯಾತ್ರೆ ಸಮಾವೇಶದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ರಾಜ್ಯವೂ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದರು.

ಶಾಸಕ ಪಿ.ರಾಜೀವ ಮಾತನಾಡಿ, ಕ್ಷೇತ್ರದ ಕಟ್ಟ ಕಡೆಯ ವ್ಯಕ್ತಿಗೆ ಸರ್ಕಾರದ ಯೋಜನೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಆದ್ದರಿಂದ ತಮ್ಮ ಸೇವೆ ಮಾಡಲು ಮತ್ತೊಂದು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.

ಮುಗಳಖೋಡ ಕ್ರಾಸ್‌ದಿಂದ ಹಿಡಕಲ್ ಗ್ರಾಮದ ಮಾರ್ಗವಾಗಿ ಬೃಹತ್ ಬೈಕ್ ರ‌್ಯಾಲಿಯು ಪಟ್ಟಣ ಪ್ರವೇಶಿಸಿತು. ಶಾಸಕರಾದ ಸಿದ್ದು ಸವದಿ, ಡಿ.ಎಂ.ಐಹೊಳೆ, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಮಲ್ಲಿಕಾರ್ಜುನ ಬಾಳಿಕಾಯಿ, ಬಿಜೆಪಿ ಚಿಕ್ಕೋಡಿ ಜಿಲ್ಲಾಧ್ಯಕ್ಷ ಡಾ. ರಾಜೇಶ ನೇರ್ಲಿ, ಅಭಯ ಮಾನವಿ, ಶಶಿಕಾಂತ ನಾಯಿಕ, ಅರುಣ ಶಹಾಪೂರ, ಕುಡಚಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಖಾನಗೌಡರ, ಬಸನಗೌಡ ಆಸಂಗಿ, ಡಿ.ಸಿ.ಸದಲಗಿ, ಶಿವಗೊಂಡ ಧರ್ಮಟ್ಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net