

ಚಿತ್ರದುರ್ಗ: ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಪ್ರಪಂಚದಲ್ಲಿ ಭಾರತದ ಗೌರವ ಹೆಚ್ಚಾಗಿದೆ ಎಂದು ಸಂಸದ ಗೋವಿಂದ ಎಂ. ಕಾರಜೋಳ ಹೇಳಿದರು.
ಜಿಲ್ಲಾ ಬಿಜೆಪಿ ಘಟಕದಿಂದ ‘ಸೇವಾ ಪಾಕ್ಷಿಕ’ ಅಭಿಯಾನದ ಅಂಗವಾಗಿ ನಗರದ ವೀರ ವನಿತೆ ಒನಕೆ ಓಬವ್ವ ವೃತ್ತದಲ್ಲಿ ಆಯೋಜಿಸಿದ್ದ ಮೋದಿ ಜೀವನ ಆಧಾರಿತ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿ, 2001-2014 ರವರೆಗೆ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಮೋದಿ ಅವರು ವಾರಣಾಸಿಯಿಂದ ಪಾರ್ಲಿಮೆಂಟ್ ಪ್ರವೇಶಿಸಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಭಾರತೀಯ ಜನತಾ ಪಕ್ಷ ಸದಸ್ಯರಾಗಿದ್ದ ಮೋದಿ ಅವರು, ಕಾಂಗ್ರೆಸೇತರ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಅವರನ್ನು ಇಡೀ ದೇಶವೇ ಹೊಗಳುತ್ತಿದೆ. ಗುಜರಾತ್‌ನಲ್ಲಿ ಜನಿಸಿದ ಅವರಿಗೆ ಅವರ 8ನೇ ವಯಸ್ಸಿನಲ್ಲಿ ಆರ್‌ಎಸ್‌ಎಸ್ ಪರಿಚಯವಾಯಿತು.
ಸಂಘದ ಪೂರ್ಣಾವಧಿ ಕಾರ್ಯಕರ್ತರಾಗಿದ್ದ ಅವರು, 1985ರಲ್ಲಿ ಬಿಜೆಪಿಗೆ ನಿಯೋಜಿತರಾಗಿ ಪಕ್ಷದಲ್ಲಿ ಹಂತ ಹಂತವಾಗಿ ಬೆಳೆದು ಪ್ರಧಾನಿ ಆಗಿದ್ದಾರೆ. ಮುಖ್ಯಮಂತ್ರಿ, ಪ್ರಧಾನಿ ಆಗಿ ಅವರು ರೂಪಿಸಿದ ಅನೇಕ ಜನಪರ ನೀತಿಗಳು ಆರ್ಥಿಕ ಬೆಳವಣಿಗೆಗಳನ್ನು ಉತ್ತೇಜಿಸುತ್ತಿವೆ. 2014ರ ಚುನಾವಣೆಯಲ್ಲಿ ಮೋದಿ ನೇತೃತ್ವದಲ್ಲಿ ಬಿಜೆಪಿ ಸಂಸತ್ತಿನಲ್ಲಿ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿತು ಎಂದರು.
ಪೌರ ಕಾರ್ಮಿಕರ ಸೇವೆ ಕಾಯಂ ಆಗಲಿ:
ಅನನ್ಯ ಸೇವೆ ಸಲ್ಲಿಸುತ್ತಿರುವ ಪೌರ ಕಾರ್ಮಿಕರನ್ನು ನಾವೆಲ್ಲರೂ ಗೌರಯುತವಾಗಿ ಕಾಣಬೇಕಿದೆ. ಅವರ ಸೇವೆಗೆ ಅಭಿನಂದಿಸಬೇಕಿದೆ. ಬಸವರಾಜ ಬೊಮ್ಮಾಯಿ ಅವರು ಮುಖ್ಯ ಮಂತ್ರಿಯಾಗಿದ್ದಾಗ ಅಂದಾಜು 20 ಸಾವಿರ ಪೌರ ಕಾರ್ಮಿಕರ ಸೇವೆ ಕಾಯಂ ಆಗಿದೆ. ಇಂದಿಗೂ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರ ಸೇವೆಯನ್ನು ಕಾಯಂ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.
ಎಂಎಲ್‌ಸಿ ಕೆ.ಎಸ್. ನವೀನ್, ಮಾಜಿ ಶಾಸಕರಾದ ಜಿ.ಎಚ್. ತಿಪ್ಪಾರೆಡ್ಡಿ, ಎಸ್.ಕೆ. ಬಸವರಾಜನ್, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ. ಕುಮಾರಸ್ವಾಮಿ, ಜಿಪಂ ಮಾಜಿ ಅಧ್ಯಕ್ಷ ಲಕ್ಷ್ಮಣ್, ನಗರಸಭೆ ಸದಸ್ಯ ಹರೀಶ್, ಹನುಮಂತೇಗೌಡ, ಸಂಪತ್‌ಕುಮಾರ್, ರಾಮದಾಸ್, ಲೋಕೇಶ್, ಕೆ.ನಾಗರಾಜ್, ನಾಗರಾಜ್ ಬೇದ್ರೆ, ವೆಂಕಟೇಶ್ ಯಾದವ್, ಮಲ್ಲೇಶ್, ರಾಮರೆಡ್ಡಿ, ಎಂವೈಟಿಸ್ವಾಮಿ, ಮೋಹನ್, ಪಾಂಡು, ಕವನ, ರಚನಾ, ಭಾರತಿ, ವೀಣಾ, ಮಂಜುಳಮ್ಮ, ಕಾಂಚನ, ಗೋವಿಂದಪ್ಪ, ಭರತ್, ಗರಡಿ ಪ್ರಕಾಶ್, ಪ್ರಶಾಂತ್, ಶ್ರೀಧರ್, ಲಿಂಗರಾಜು, ಪ್ರಶಾಂತ್, ಪಾಪೇಶ್‌ನಾಯ್ಕ, ಸಚಿನ್, ಕಿರಣ್, ವಸಂತ್, ಮಲ್ಲಿಕಾರ್ಜನ್, ವಿರುಪಾಕ್ಷ ಯಾದವ್, ಮಲ್ಲೇಶ್‌ಯಾದವ್ ಇತರರು ಇದ್ದರು.