ಮೋದಿ ಅವಧಿಯಲ್ಲಿ ಭ್ರಷ್ಟಾಚಾರ ರಹಿತ ಆಡಳಿತ

12 ckm 4
ಚಿಕ್ಕಮಗಳೂರು ಎಐಟಿ ಕಾಲೇಜು ಸಭಾಂಗಣದಲ್ಲಿ ಯೂಥ್ ಫಾರ್ ನೇಷನ್ ಸಂಘಟನೆಯಿAದ ಶನಿವಾರ ಆಯೋಜಿಸಲಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ೧೧ ವರ್ಷದ ಸರ್ಕಾರದ ಸಂಕಲ್ಪ-ಸಾಧನೆಗಳ ಕುರಿತ ಸಂವಾದ ಕಾರ್ಯಕ್ರಮವನ್ನು ಸಂಸದ ತೇಜಸ್ವಿ ಸೂರ್ಯ ಉದ್ಘಾಟಿಸಿದರು. ಕೋಟ ಶ್ರೀನಿವಾಸ ಪೂಜಾರಿ, ಸಿ.ಟಿ.ರವಿ, ಸಂತೋಷ್ ಕೋಟ್ಯಾನ್, ಎಂ.ಆರ್.ದೇವರಾಜ ಶೆಟ್ಟಿ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ದೇಶದಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಬೆಳಗ್ಗೆ ಎದ್ದರೆ ಸಾಕು ಕೇವಲ ಭ್ರಷ್ಟಾಚಾರದ ಸುದ್ದಿಗಳನ್ನೇ ಓದಿ ದಿನ ಆರಂಭಿಸಬೇಕಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ಅವಧಿಯಲ್ಲಿ ಒಂದೇ ಒಂದು ಭ್ರಷ್ಟಾಚಾರವನ್ನು ಕಾಣಲು ಸಾಧ್ಯವಿಲ್ಲ. ಆ ಮಟ್ಟಿಗಿನ ಒಳ್ಳೆಯ ಆಡಳಿತವನ್ನು ನರೇಂದ್ರ ಮೋದಿ ನೀಡಿದ್ದಾರೆ ಎಂದು ಬಿಜೆಪಿ ರಾಷ್ಟಿçÃಯ ಯುವ ಮೋರ್ಚಾ ಅಧ್ಯಕ್ಷ ಹಾಗೂ ಸಂಸದ ತೇಜಸ್ವಿ ಸೂರ್ಯ ತಿಳಿಸಿದರು.

ನಗರದ ಎಐಟಿ ಕಾಲೇಜು ಸಭಾಂಗಣದಲ್ಲಿ ಯೂಥ್ ಫಾರ್ ನೇಷನ್ ಸಂಘಟನೆಯಿAದ ಶನಿವಾರ ಆಯೋಜಿಸಲಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ೧೧ ವರ್ಷದ ಸರ್ಕಾರದ ಸಂಕಲ್ಪ-ಸಾಧನೆಗಳ ಕುರಿತ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಹಾಗೂ ಸಂವಾದದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಕೆಟ್ಟ ಆಡಳಿತ ಎಂದರೆ ಏನು ಎಂಬುದನ್ನು ಕಳೆದ ೧೧ ವರ್ಷದ ಅವಧಿಯಲ್ಲಿ ನೋಡಲು ಸಾಧ್ಯವೇ ಇಲ್ಲ ಎಂದರು.

ದೇಶದಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿರುವಾಗ ಹಗರಣಗಳು, ಭ್ರಷ್ಟಾಚಾರ ಸಾಮಾನ್ಯ ಎನ್ನುವಂಥ ಪರಿಸ್ಥಿತಿ ಇತ್ತು. ಕಲ್ಲಿದ್ದಲು, ಅಗಸ್ತಾ ವೆಸ್ಟ್ಲ್ಯಾಂಡ್, ಕಾಮನ್ವೆಲ್ತ್ ಹೀಗೆ ಒಂದರ ಹಿಂದೊAದರAತೆ ಹಗರಣಗಳು ನಡೆಯುತ್ತಲೇ ಇದ್ದವು. ಆದರೆ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ದೇಶದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಜನರಿಗೆ ಕೇಂದ್ರ ಸರ್ಕಾರದ ಮೇಲೆ ನಂಬಿಕೆ ಬಂದಿದೆ ಎಂದು ಹೇಳಿದರು.

ನಾವು ನೀಡುವ ಆಡಳಿತದಲ್ಲಿ ಜನರಿಗೆ ನಂಬಿಕೆ ಬರಬೇಕು ಎಂದರೆ ಅದು ನಾವು ನೀಡುವ ಒಳ್ಳೆಯ ಆಡಳಿತದಿಂದ ಮಾತ್ರ ಸಾಧ್ಯವಾಗುತ್ತದೆ. ಕಳೆದ ೧೧ ವರ್ಷದ ಅವಧಿಯಲ್ಲಿ ದೇಶದಲ್ಲಾಗಿರುವ ಬದಲಾವಣೆಗಳನ್ನು ನಾವು ಪಿಪಿಟಿ ಮೂಲಕ ಹೇಳುವ ಅಗತ್ಯವಿಲ್ಲ. ಪರಿಜ್ಞಾನ ಇರುವವರು, ಕಾಂಗ್ರೆಸ್ ಸೇರದಿರುವ ಪ್ರತಿಯೊಬ್ಬರೂ ದೇಶದಲ್ಲಿ ಉತ್ತಮ ಬದಲಾವಣೆಯಾಗಿದೆ ಎನ್ನುತ್ತಿದ್ದಾರೆ. ದಿನ ನಿತ್ಯದ ಜೀವನದಲ್ಲಿ ನಮಗೆ ಗೊತ್ತಿಲ್ಲದೆ ಬದಲಾವಣೆ ಅನುಭವಕ್ಕೆ ಬರುತ್ತಿದೆ ಎಂದು ಹೇಳಿದರು.

ವಿಜ್ಞಾನ ಮತ್ತು ತಂತ್ರಜ್ಞಾನದ ಕ್ಷೇತ್ರದ ಉತ್ತೇಜನಕ್ಕೆ ೧೧ ವರ್ಷಗಳಲ್ಲಿ ಹೆಚ್ಚಿನ ಮಹತ್ವ ನೀಡಲಾಗಿದೆ. ಈ ಕ್ಷೇತ್ರಗಳಲ್ಲಿ ಸಂಶೋಧನೆಗೆAದು ಹತ್ತಾರು ಖಾಸಗಿ ಕಂಪನಿಗಳಿಗೆ ಅನುದಾನ ಮತ್ತು ಸವಲತ್ತುಗಳನ್ನು ನೀಡಿ ಈ ಕ್ಷೇತ್ರದಲ್ಲಿ ಭಾರತವನ್ನು ಜಗತ್ತಿನ ನಾಯಕನನ್ನಾಗಿಸಲು ಮುಂದಡಿ ಇಡಲಾಗಿದೆ ಎಂದು ತಿಳಿಸಿದರು.

ಎಐ ಸೇರಿದಂತೆ ಇನ್ನಿತರೆ ಆಳ ತಂತ್ರಜ್ಞಾನದಲ್ಲಿ ಸಂಶೋಧನೆ ಹಾಗೂ ಆವಿಷ್ಕಾರಕ್ಕೆ ೫೦ ಸಾವಿರ ಕೋಟಿ ರೂ. ಅನುದಾನ ನೀಡಲಾಗುತ್ತಿದೆ. ಇದೇ ವೇಳೆ ಬೀದಿ ಬದಿ ವ್ಯಾಪಾರಿಗಳ ಆರ್ಥಿಕ ಸ್ವಾವಲಂಬನೆ ದೃಷ್ಠಿಯಲ್ಲಿಟ್ಟುಕೊಂಡು ಪಿಎಂ ಸ್ವನಿಧಿ ಯೋಜನೆಯಡಿ ೧೦ ಸಾವಿರದಿಂದ ೧ ಲಕ್ಷ ರೂ. ವರೆಗೆ ಸಾಲ ಸೌಲಭ್ಯ ನೀಡಲಾಗುತ್ತಿದೆ. ಜಾಹಿರಾತು ನೀಡಿದರೆ ಜನರು ಮತ ಹಾಕುತ್ತಾರೆ ಎನ್ನುವ ಮನಸ್ಥಿತಿಯಿಂದ ಅಭಿವೃದ್ಧಿ, ಒಳ್ಳೆಯ ಆಡಳಿತ ಎನ್ನುವುದು ಜನರ ಅನುಭವಕ್ಕೆ ಬರುವಂತಾಗಿರುವುದು ಕಳೆದ ೧೧ ವರ್ಷದ ಅವಧಿಯಲ್ಲಿ ಎಂದರು.

ಸAಸದ ಕೋಟ ಶ್ರೀನಿವಾಸ್ ಪೂಜಾರಿ ಮಾತನಾಡಿ, ಸಮರ್ಥ, ಸಮೃದ್ಧ ಭಾರತ ನಿರ್ಮಾಣ ಮಾಡಬೇಕು ಎಂದು ನಮ್ಮ ಹಿರಿಯರು ಬಿಜೆಪಿ ಹುಟ್ಟುಹಾಕಿದ್ದಾರೆ. ಅಧಿಕಾರದ ಹಿಡಿಯಬೇಕು ಎಂಬ ಉz್ದೆÃಶದಿಂದ ಪಕ್ಷ ಹುಟ್ಟುಹಾಕಿಲ್ಲ. ಆದರೆ ಅಧಿಕಾರದ ಜವಾಬ್ದಾರಿ ಬಂದರೆ ಮಾತ್ರ ದೇಶ ಕಟ್ಟಲು ಸಾಧ್ಯ ಎಂಬ ಕಾರಣಕ್ಕೆ ಅಧಿಕಾರಕ್ಕೇರಿz್ದÉÃವೆ. ಇದೇ ಕಾರಣದಿಂದಲೇ ಕಳೆದ ೧೧ ವರ್ಷದಿಂದ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶವನ್ನು ಕಟ್ಟಿತೋರಿಸಿz್ದÉÃವೆ ಎಂದು ಹೇಳಿದರು.

ನರೇಂದ್ರ ಮೋದಿ ಅವರು ಪ್ರಧಾನಿ ಆಗಿದ್ದರಿಂದಲೇ ನಮ್ಮ ಕಾಲದಲ್ಲೇ ಆರ್ಟಿಕಲ್ ೩೭೦ ರದ್ದು ಮಾಡಿದ್ದು ನೋಡಿz್ದÉÃವೆ. ಪೌರತ್ವ ಕಾಯ್ದೆಗೆ ತಿದ್ದುಪಡಿ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಿz್ದÉÃವೆ. ಇಂದು ಭಾರತ ಸ್ವಾಭಿಮಾನಿ, ಶಕ್ತಿಶಾಲಿ ದೇಶವಾಗಿ ಜಗತ್ತಿನ ಎದುರು ತಲೆ ಎತ್ತಿ ನಿಂತಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಭಾರತ ವಿಶ್ವಗುರು ಆಗಬೇಕಾದರೆ ವಿಕಸಿತ ಭಾರತವಾಗಬೇಕು. ಹೀಗಾಗಿಯೇ ಪ್ರಧಾನಿ ನರೇಂದ್ರ ಮೋದಿ ಅವರು ವಿಕಸಿತ ಭಾರತದ ಸಂಕಲ್ಪ ಭಾರತದ ಸಂಕಲ್ಪವಾಗಬೇಕು ಎಂದು ಕರೆನೀಡಿದ್ದರು. ಆತ್ಮನಿರ್ಭರ ಭಾರತ ಎಂಬುದು ಕೆಲವೊಬ್ಬರಿಗೆ ಮಾತ್ರವಲ್ಲ. ಬದಲಿಗೆ ಈ ದೇಶದ ಪ್ರತಿಯೊಬ್ಬರೂ ಈ ಸಂಕಲ್ಪ ತೊಟ್ಟರೆ ಅವರ ಬದುಕಿನಲ್ಲಿ ಬದಲಾವಣೆ ಬರುತ್ತದೆ. ಆಗ ಭಾರತ ಒಂದು ಹೆಜ್ಜೆ ಮುಂದೆ ಹೋಗುತ್ತದೆ. ಹೀಗಾಗದರೆ ಭಾರತ ವಿಶ್ವಗುರು, ವಿಶ್ವ ಮಿತ್ರವಾಗಲು ತುಂಬಾ ವರ್ಷಗಳು ಬೇಕಾಗುವುದಿಲ್ಲ ಎಂದು ಹೇಳಿದರು.

ಯೂಥ್ ಫಾರ್ ನೇಷನ್ ಸಂಚಾಲಕ ಸಂತೋಷ್ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಡಿ.ಎನ್.ಜೀವರಾಜ್, ಮಾಜಿ ಶಾಸಕ ಡಿ.ಎಸ್.ಸುರೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ ಶೆಟ್ಟಿ ಮತ್ತಿತರರಿದ್ದರು.

ದೇಶದಲ್ಲಾಗಿದೆ ವೈಮಾನಿಕ ಕ್ರಾಂತಿ

ದೇಶದಲ್ಲಿ ಅಭಿವೃದ್ಧಿಯ ವೇಗ ಹೇಗಿದೆ ಎಂದರೆ ಕರ್ನಾಟಕ ಮಾತ್ರವಲ್ಲದೆ ಇಡೀ ದೇಶದಲ್ಲಿ ಒಂದರಿAದ ಎರಡು ಗಂಟೆ ಪ್ರಯಾಣ ಮಾಡುವಷ್ಟರಲ್ಲಿ ಒಂದು ವಿಮಾನ ನಿಲ್ದಾಣ ಸಿಗುವಂತಾಗಿದೆ. ದೇಶದಲ್ಲಿ ವೈಮಾನಿಕ ಕ್ರಾಂತಿಯೇ ಆಗಿದೆ. ನಾಲ್ಕರಿಂದ ಐದು ಸಾವಿರ ರೂ.ನಲ್ಲಿ ವಿಮಾನ ಯಾನ ಮಾಡಬಹುದಾಗಿದೆ. ಇದೆಲ್ಲದಕ್ಕೂ ಮೋದಿ ಸರ್ಕಾರವೇ ಕಾರಣ ಎಂದು ತೇಜಸ್ವಿ ಸೂರ್ಯ ಅಭಿಪ್ರಾಯಪಟ್ಟರು.

ಮನಿ ಆರ್ಡರ್ ಕಾಲದಿಂದ ಸಿಂಗಪುರ, ಅಮೇರಿಕಾದಂಥ ದೇಶಗಳಿಗೆ ನಮ್ಮ ದೇಶದ ಮಕ್ಕಳು ಎಸ್‌ಎಂಎಸ್, ವಾಟ್ಸ್ ಆಪ್ ಮಾಡುವ ರೀತಿ ಹಣವನ್ನು ಕಳಿಸುವ ಮಟ್ಟಕ್ಕೆ ಬಂದಿದ್ದಾರೆ. ಇದು ಡಿಜಿಟಲ್ ಇಂಡಿಯಾದ ಕ್ರಾಂತಿ. ಫಾರಿನ್ ಎಂದರೆ ಬಹಳ ವೇಗವಾಗಿ ಬೆಳೆದ ದೇಶಗಳು ಎಂಬ ಭಾವನೆ ಇದೆ. ಆದರೆ ಅಮೇರಿಕ ಸೇರಿದಂತೆ ಹಲವು ದೇಶಗಳಿಗೆ ನಾವು ನಿಯೋಗ ಹೋಗಿದ್ದಾಗ ಡಿಜಿಟಲ್ ಇಂಡಿಯಾ ಬಗ್ಗೆ ನಮಗೂ ಮಾಹಿತಿ ಕೊಡಿ ಎಂದು ಅಲ್ಲಿನ ಮುಖಂಡರು ಕೇಳುವ ಮಟ್ಟಕ್ಕೆ ಇಂದು ನಾವು ಬೆಳೆದಿz್ದÉÃವೆ. ೨ ಲಕ್ಷ ಕೋಟಿ ರೂ.ಗಳನ್ನು ಭಾರತ ದೇಶ ಕೇವಲ ನೇರ ನಗದು ವಹಿವಾಟಿನಲ್ಲಿ ಉಳಿತಾಯ ಮಾಡಿದೆ. ಇದು ಒಂದು ದೇಶದ ವಾರ್ಷಿಕ ಬಜೆಟ್‌ನಷ್ಟು ಗಾತ್ರದ್ದಾಗಿದೆ ಎಂದರು.

ಸರ್ಜಿಕಲ್ ಸ್ಟೆçÊಕ್, ಆಪರೇಷನ್ ಬಾಲಕೋಟ್, ಆಪರೇರಷನ್ ಸಿಂಧೂರದAಥ ದಿಟ್ಟ ಕ್ರಮಗಳ ಮೂಲಕ ಭಯೋತ್ಪಾದನೆ ಮಟ್ಟ ಹಾಕುವಲ್ಲಿ ದೇಶ ಯಶಸ್ಸು ಕಂಡಿದೆ. ಮೇಕ್ ಇನ್ ಇಂಡಿಯಾದಲ್ಲಿ ತಯಾರಾದ ನಮ್ಮ ಆಕಾಶ್ ಕ್ಷಿಪಣಿಯನ್ನು ಖರೀದಿಸಲು ಹಲವು ದೇಶಗಳು ಕಾತುರವಾಗಿವೆ. ಇದಕ್ಕಾಗಿ ನರೇಂದ್ರ ಮೋದಿ ಅವರನ್ನು ನಮ್ಮ ದೇಶಕ್ಕೆ ಕಳಿಸಿಕೊಡಿ ಎಂದು ಕೋರಿಕೆ ಇಡುತ್ತಿವೆ. ಮೋದಿ ಅವರ ವಿದೇಶ ಪ್ರವಾಸದ ಬಗ್ಗೆ ಮಾತನಾಡುವ ಕಾಂಗ್ರೆಸಿಗರಿಗೆ ಇದು ಅರ್ಥವಾಗಬೇಕು.

ತೇಜಸ್ವಿ ಸೂರ್ಯ, ಸಂಸದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net