ಮೋಘಾದಲ್ಲಿ ಶ್ರೀ ಗಣೇಶ ಮೂರ್ತಿ, ಕಳಸಾರೋಹಣ ಪ್ರತಿಷ್ಠಾಪನೆ 8ರಂದು

PH 14
Published on

ಚಿಂಚೋಳಿ: ಮೋಘಾ ಗ್ರಾಮದಲ್ಲಿ ಶ್ರೀ ಗಣೇಶ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾ ರೋಹಣ ಸಮಾರಂಭ ಸೆ.8ರಂದು ಸಂಜೆ 5 ಗಂಟೆಗೆ ಆಯೋಜಿಸಲಾಗಿದೆ ಎಂದು ಗ್ರಾಮಸ್ಥ ಚನ್ನಪ್ಪ ಮೋಘಾ, ಹಾಗೂ ಸಿದ್ದು ಕಲಶೇಟ್ಟಿ ತಿಳಿಸಿದ್ದಾರೆ.

ಹಾರಕೂಡದ ಶ್ರೀ ಡಾ.ಚನ್ನವೀರ ಶಿವಾಚಾರ್ಯರು ಲೋಕಾರ್ಪಣೆಗೊಳಿಸುವರು. ಶ್ರೀ ಶಂಕ್ರಯ್ಯ ಸ್ವಾಮಿ ಪಸ್ತಾಪುರ, ಶ್ರೀ ಅಮೋಘಸಿದ್ಧ ಮಹಾರಾಜರು ಪಸ್ತಾಪೂರ ಸಮ್ಮುಖ ವಹಿಸುವರು. ತಾಲೂಕಿನ ವಿವಿಧ ರಾಜಕೀಯ ಗಣ್ಯರು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಪ್ರಕಟಣೆಯಲ್ಲಿ ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net