ಮೋಕ್ಷ ಸಾಧನೆಗೆ ಪ್ರಯತ್ನಿಸಿ

07ydg03
Published on


ಯಾದಗಿರಿ: ಭಗವಂತನ ಆದೇಶವಿಲ್ಲದೆ ಈ ಸೃಷ್ಠಿಯ ಮೇಲೆ ಒಂದು ಹುಲ್ಲು ಕಡ್ಡಿ ಸಹ ಅಲುಗಾಡದು. ಆತನ ಕೃಪೆಯಿಂದ ಮಾನವ ಜನ್ಮ ಪಡೆದುಕೊಂಡಿರುವ ನಾವು ಜೀವಿತದ ಅವಯಲ್ಲಿ ಮೋಕ್ಷ ಸಾಧನೆಗೆ ಪ್ರಯತ್ನಿಸಬೇಕು ಎಂದು ಪಂ.ನರಸಿಂಹಾಚಾರ್ಯ ಪುರಾಣಿಕ ನುಡಿದರು.

ನಗರದ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಪರಿಮಳ ಮಂಟಪದಲ್ಲಿ ಅಕ ಶ್ರಾವಣ ಮಾಸದ ನಿಮಿತ್ತ ಮಧ್ವ ಮಹಾ ಪರಿಷತ್ತಿನ ಜಿಲ್ಲಾ ಘಟಕದಿಂದ ಪುರುಷಸೂಕ್ತ ಹಾಗೂ ಶ್ರೀಸೂಕ್ತ ಹೋಮ ಹಾಗೂ ಧಾಮರ್ಿಕ ಸಮಾರಂಭದಲ್ಲಿ ಆಶಿರ್ವಚ ನೀಡಿ, ದೇವರ ನಾಮಸ್ಮರಣೆ ಮೋಕ್ಷಕ್ಕೆ ಹಾದಿ ಮಾಡಿಕೊಡುತ್ತದೆ. ಇಂದಿನ ಜಂಜಾಟದ ಜೀವನದಲ್ಲಿ ಮನುಷ್ಯ ಧರ್ಮ ಹಾಗೂ ಸಂಪ್ರದಾಯಗಳನ್ನು ಮರೆಯುತ್ತಿರುವುದು ಕಳವಳವಾರಿ ಸಂಗತಿ ಎಂದರು.

ದೇವರ ಪ್ರಿತಿಗಾಗಿ ಮಾಡಿದ ಕರ್ಮಗಳು ಅದರ ದುಪ್ಪಟ್ಟು ಪ್ರಮಾಣದಲ್ಲಿ ಪುಣ್ಯವನ್ನು ತಂದು ಕೊಡುತ್ತವೆ. ಆಪತ್ತುಗಳ ಪರಿಹಾರಕ್ಕಾಗಿ ಆತನ ಅನುಗ್ರಹ ಅವಶ್ಯವಾಗಿ ಬೇಕು. ಭೂಮಿಯ ಮೇಲೆ ವಾಸಿಸುವ ಸರ್ವರಿಗೂ ಒಳಿತನ್ನು ಬಯಸಿ ಹಾಗೂ ಆರೋಗ್ಯ, ಸುಖ-ಸಂಪತ್ತು ಪ್ರಾಪ್ತಿಗಾಗಿ ಪಂಚಹೋಮ ಕುಂಡಗಳಲ್ಲಿ ಪುರುಷಸೂಕ್ತ ಹಾಗೂ ಶ್ರೀಸೂಕ್ತ ಹವನ ಹಮ್ಮಿಕೊಳ್ಳುವ ಮೂಲಕ ಅಕ ಮಾಸದ ಧಾಮರ್ಿಕ ಸಂಮಾರಂಭವನ್ನು ಸಂಪನ್ನಗೊಳಿಸಲಾಯಿತು ಎಂದು ಹೇಳಿದರು.

ಈ ಅವಯಲ್ಲಿ ಪ್ರತಿನಿತ್ಯ ಬೆಳಗ್ಗೆ ಶ್ರೀಮದ್ಭಾಗವತ ಪ್ರವಚನ, ಸಾಯಂಕಾಲ ಪ್ರವಚನ ಜತೆಗೆ ಹರಿಕಥಾಮೃತ ಸಾರ ಪಾರಾಯಣ, ಚಾತುಮರ್ಾಸದ ರಂಗೋಲಿ ಸೇವೆ ಹಾಗೂ ಮಕ್ಕಳು ಮತ್ತು ಮಹಿಳೆಯರಿಂದ ಕೋಲಾಟ ಸೇವೆ ನಡೆಯಿತು. ಕಾರ್ಯಕ್ರಮದಲ್ಲಿ ಭಜನಾ ಮಂಡಳಿಯ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net