

ಎಂ.ಕೆ.ಹುಬ್ಬಳ್ಳಿ: ಪಟ್ಟಣದಲ್ಲಿ ಮಂಗಳವಾರ ಮೊಹರಂ ಹಬ್ಬ ಸಂಭ್ರಮದಿಂದ ಆಚರಿಸಲಾಯಿತು.
ಐದು ದಿನಗಳಿಂದ ಪಟ್ಟಣದ ವಿವಿಧೆಡೆ ಸ್ಥಾಪಿಸಿ, ಪೂಜಿಸಲಾಗಿದ್ದ ಪಂಜಾಗಳನ್ನು ಡೋಲಿಯಲ್ಲಿಟ್ಟು ಮೆರವಣಿಗೆ ಮಾಡಲಾಯಿತು. ಹಿಂದು&ಮುಸ್ಲಿಂ ಸಮುದಾಯದವರು ಸೇರಿ ಮೊಹರಂ ಆಚರಿಸುವ ಮೂಲಕ ಭಾವೆಕ್ಯ ಮೆರೆದರು. ಬೆಂಕಿಯ ಕೆಂಡ ಹಾಯ್ದು ಹರಕೆ ತೀರಿಸಿದರು. ಸಂಜೆ ಮೆರವಣಿಗೆ ಮೂಲಕ ಮಲಪ್ರಭಾ ನದಿಗೆ ಡೋಲಿಗಳು ಸಾಗಿದವು.