

ಬೆಳಗಾವಿ: ಬೈಲಹೊಂಗಲ ಸಮೀಪದ ಹೊಸೂರ ಗ್ರಾಮದ ರೈತ ದೇವೇಂದ್ರಪ್ಪ ಜಾಧವ ಅವರ ಜಮೀನಿನಲ್ಲಿ ಪ್ರತ್ಯಕ್ಷವಾದ ಮೊಸಳೆಯನ್ನು ಗ್ರಾಮಸ್ಥರು ಭಾನುವಾರ ಸೆರೆಹಿಡಿದು, ಅರಣ್ಯ ಇಲಾಖೆ ಅಕಾರಿಗಳಿಗೆ ಒಪ್ಪಿಸಿದರು.
ಕಳೆದೊಂದು ವಾರದಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಮಲಪ್ರಭಾ ನದಿಯಲ್ಲಿನ ಮೊಸಳೆ ಕೃಷಿ ಭೂಮಿಗೆ ನುಗ್ಗಿತ್ತು. ಮೊಸಳೆ ಕಂಡ ರೈತರು ಗ್ರಾಮಸ್ಥರಿಗೆ ವಿಷಯ ತಿಳಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ ಸ್ಥಳೀಯರು ಮೊಸಳೆ ಸೆರೆಹಿಡಿದರು. ಮೊಸಳೆ ಸೆರೆಯಾದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.