

ಬೀದರ್: ಭಾಲ್ಕಿ ತಾಲ್ಲೂಕಿನ ಕಣಜಿ ಗ್ರಾಮದಲ್ಲಿ ಆಗಸ್ಟ್ 15 ರಂದು ಮಾಜಿ ಶಾಸಕ ದಿ. ಕಲ್ಯಾಣರಾವ್ ಮೊಳಕೇರಿ ಅವರ ಮೂರ್ತಿ ಪ್ರತಿಷ್ಠಾಪನೆಯಾಗಲಿದೆ.
ಮಧ್ಯಾಹ್ನ 12ಕ್ಕೆ ನಡೆಯಲಿರುವ ಸಮಾರಂಭದಲ್ಲಿ ಬಸವಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದ್ದೇವರು ಮೂರ್ತಿ ಅನಾವರಣ ಮಾಡುವರು.
ಇದೇ ವೇಳೆ ಸಾಹಿತಿ ಪಂಚಾಕ್ಷರಿ ಪುಣ್ಯಶೆಟ್ಟಿ ಅವರು ರಚಿಸಿರುವ ‘ಜನನಾಯಕ ಕಲ್ಯಾಣರಾವ್ ಮೊಳಕೇರಿ' ಕೃತಿ ಬಿಡುಗಡೆ ಸಹ ಆಗಲಿದೆ.
ಕಾರ್ಯಕ್ರಮದಲ್ಲಿ ಮೊಳಕೇರಿ ಅವರ ಅಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮೊಳಕೇರಿ ಅಭಿಮಾನಿ ಬಳಗ ಮನವಿ ಮಾಡಿದೆ.