

ಆಳಂದ: ವಿದ್ಯಾರ್ಥಿಗಳು ಮತ್ತು ಯುವಜನತೆ ಮೊಬೈಲ್ ಬಳಕೆ ಬಿಟ್ಟು ಅಧ್ಯಯನಶೀಲರಾಗಬೇಕು. ಮೊಬೈಲ್ ಬಳಕೆಯಿಂದ ಮನಸ್ಸು ಹಾಳಾಗುತ್ತದೆ. ಯೋಗ, ಧ್ಯಾನ ದಿನನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಂಸ್ಥೆಯ ಅಧ್ಯಕ್ಷರೂ ಆದ ಮಾಜಿ ಶಾಸಕ ಸುಭಾಷ ಗುತ್ತೇದಾರ ಕರೆ ನೀಡಿದರು.
ಜೀವನಜ್ಯೋತಿ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಯ ಮಾತೋಶ್ರೀ ಅಂಬವ್ವಾ ರುಕ್ಮಯ್ಯ ಗುತ್ತೇದಾರ ಸ್ಮಾರಕ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ವಯಸ್ಸಿನಲ್ಲಿ ಮನಸ್ಸು ಆಕರ್ಷಣೆಗೊಳಗಾಗುವುದು ಸಹಜ. ಅವುಗಳ ಹಿಂದೆ ಹೋದವರು ಜೀವನದಲ್ಲಿ ನೊಂದಿರುವ ನಿದರ್ಶನಗಳು ಹೆಚ್ಚಾಗಿವೆ. ಕಾಲೇಜು ಸಂದರ್ಭದಲ್ಲಿ ಉತ್ತಮ ಸ್ನೇಹ ಗಳಿಸಿಕೊಂಡು ಶೈಕ್ಷಣಿಕ ಪ್ರಗತಿ ಸಾಧಿಸಿದರೆ ಉತ್ತಮ ಜೀವನ ರೂಪಿಸಿಕೊಳ್ಳಬಹುದು ಎಂದರು.
ಎಸ್‌ಆರ್‌ಜಿ ಫೌಂಡೇಷನ್ ಆಡಳಿತಾಧಿಕಾರಿ ಡಾ.ರಾಘವೇಂದ್ರ ಚಿಂಚನಸೂರ, ಪ್ರಾಚಾರ್ಯರಾದ ಡಾ. ಅಪ್ಪಾಸಾಬ ಬಿರಾದಾರ, ಅಶೋಕರೆಡ್ಡಿ, ಕಲ್ಯಾಣಿ ಸಾವಳಗಿ, ಪ್ರಮುಖರಾದ ಶ್ರೀಧರ ಪಾಟೀಲ್, ಮಲ್ಲಿನಾಥ ತುಕ್ಕಾಣೆ, ಮಲ್ಲಿಕಾರ್ಜುನ ಬುಕ್ಕೆ, ರಾಜಕುಮಾರ ಚಿಚಕೋಟೆ, ಸಿದ್ದಾರಾಮ ಧೋತ್ರೆ, ಶಶಿಕಾಂತ ಭೂಸಣಗೆ, ಶರಣಬಸಪ್ಪ ಶಿರೂರೆ, ಸಂತೋಷ ಕುಲಕರ್ಣಿ, ಜ್ಯೋತಿ ವಿಶಾಖ್ ಇದ್ದರು.