ಮೊಬೈಲ್‌ನಲ್ಲೆ ಮಾತಾಡುವಾಗ್ಲೆ ಬೈಕ್ ಕಳವು

Crime Logo
Published on

ಕಲಬುರಗಿ: ನಗರದ ಕುಸನೂರ ಓಕಳಿ ಕ್ಯಾಂಪ್ ಬಳಿ ರಸ್ತೆಯಲ್ಲಿ ಬೈಕ್ ಮೇಲೆ ಹೋಗುವಾಗ ಫೋನ್ ಬಂದಿದೆ ಎಂದು ರಸ್ತೆ ಪಕ್ಕ ಬೈಕ್ ನಿಲ್ಲಿಸಿ, ಸ್ವಲ್ಪ ಮುಂದೆ ಮಾತನಾಡುತ್ತ ಹೋಗಿದ್ದಾಗ ಕಳ್ಳತನ ಮಾಡಿರುವ ಕುರಿತು ಎಂ.ಬಿ.ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನಗರದ ಉದನೂರ ರಸ್ತೆಯ ಶರಣಗೌಡ ಪಾಟೀಲ್ ಬೈಕ್ ಕಳೆದುಕೊಂಡವರು. ಜೂ.೧೯ರಂದು ಸಂಜೆ ೫ಗಂಟೆಗೆ ವೈಯಕ್ತಿಕ ಕೆಲಸದ ಹಿನ್ನೆಲೆಯಲ್ಲಿ ಸಂಚರಿಸುವಾಗ ಓಕಳಿ ಕ್ಯಾಂಪ್ ಬಳಿ ಬೈಕ್ ನಿಲ್ಲಿಸಿ, ಫೋನ್‌ನಲ್ಲಿ ಮಾತನಾಡುತ್ತ ಮುಂದೆ ಹೋಗಿz್ದೆÃನೆ. ವಾಪಸ್ ಬರುವ ಹೊತ್ತಿಗೆ ಬೈಕ್ ಕಳ್ಳತನ ಮಾಡಲಾಗಿದೆ ಎಂದು ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net