

ಮೂಡಲಗಿ: ಯುವಜನತೆ ಹೆಚ್ಚಾಗಿ ಮೊಬೈಲಗಳಲ್ಲಿ ಫೋಟೋ ತೆಗೆಯುತ್ತಿರುವುದರಿಂದ ಛಾಯಾಗ್ರಾಹಕರ ವೃತ್ತಿಗೆ ಧಕ್ಕೆ ಆಗುತ್ತಿದೆ ಎಂದು ಹಿರಿಯ ಛಾಯಾಗ್ರಾಹಕ ಅರ್ಜುನ ದೊಂಗಡಿ ಹೇಳಿದರು.
ಪಟ್ಟಣದಲ್ಲಿ ನೂತನವಾಗಿ ಪ್ರಾರಂಭವಾದ ವತ್ತಿನಿರತ ಛಾಯಾಗ್ರಾಹಕ ಸಂದ ಕಚೇರಿಯಲ್ಲಿ ಭಾನುವಾರ ವಿಶ್ವ ಛಾಯಾಗ್ರಹಣ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಛಾಯಾಗ್ರಾಹಕರು ಜನರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳಬೇಕು ಎಂದರು.
ಸಂದ ಜಿಲ್ಲಾಧ್ಯ ಲಕ್ಷ$್ಮಣ ಯಮಕನಮರಡಿ, ರಾಜ್ಯ ನಿರ್ದೇಶಕ ಮಲ್ಲಿಕಾರ್ಜುನ ಕಂಬಳಿ, ತಾಲೂಕಾಧ್ಯ ಶಂಕರ ಹಾದಿಮನಿ, ಸುರೇಶ ರಜಪೂತ, ರವಿ ಜಾಧವ, ಪ್ರಕಾಶ ದೊಂಗಡಿ, ಮಹೇಶ ಭಸ್ಮೆ, ಮಧು ಗೌಡ, ರವಿ ಮಹಾಲಿಂಗಪುರ ಇತರರು ಇದ್ದರು.