ಮೊಬೈಲ್ ಹಿಂತಿರುಗಿಸಿದ ಸಿಬ್ಬಂದಿ

7dca0b0b-a875-4f7f-87b0-de88b8363c44 (1)--01
Published on

ಚಿತ್ರದುರ್ಗ:ಕೋಟೆ ನೋಡಲು ಗುರುವಾರ ನಗರಕ್ಕೆ ಬಂದಿದ್ದ ಬೆಂಗಳೂರಿನ ಸುನೀಲ್ ಮತ್ತವರ ಕುಟುಂಬ ಸದಸ್ಯರು, ಕೋಟೆ ಆವ ರಣದೊಳಗೆ ಕಳೆದುಕೊಂಡಿದ್ದ ಮೊಬೈಲ್‌ನ್ನು ಸಿಬ್ಬಂದಿ ಅವರಿಗೆ ಹಿಂತಿರುಗಿಸಿದ್ದಾರೆ.
ಅಂದಾಜು 20 ಸಾವಿರ ರೂ.ಮೌಲ್ಯದ ಮೊಬೈಲ್‌ನ್ನು ಅದರ ಮಾಲೀಕ ಸುನೀಲ್‌ಗೆ ಕೋಟೆ ಸಿಬ್ಬಂದಿ ಸಂತೋಷ್ ಹಾಗೂ ಬಿ.ಬೋಲ ರಾಮ್ ಇದ್ದಾರೆ. ಸಾಲು,ಸಾಲು ರಜೆಗಳ ಹಿನ್ನೆಲೆಯಲ್ಲಿ ಐತಿಹಾಸಿಕ ಕೋಟೆ ನೋಡಲು ವಿದ್ಯಾರ್ಥಿಗಳು ಹಾಗೂ ಪ್ರವಾಸಿಗರು ಸಾಕಷ್ಟು ಸಂಖ್ಯೆಯಲ್ಲಿ ದುರ್ಗಕ್ಕೆ ಬರುತ್ತಿದ್ದಾರೆ.
ಹೊಸ ವರ್ಷದ ದಿನದಂದು ಕೋಟೆಗೆ ಸಾವಿರಾರು ಸಂಖ್ಯೆಯಲ್ಲಿ ಭೇಟಿ ನೀಡುವುದು ಪ್ರತಿ ವರ್ಷ ನಡೆದು ಬಂದಿರುವ ಪ್ರಮುಖ ವಾಡಿಕೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net