ಮೊಬೈಲ್ ರಿಪೇರಿ, ಕಂಪ್ಯೂಟರ್‌ ತರಬೇತಿ

mbile
Published on

ಕೊಪ್ಪಳ: ಸ್ಟೆಟ್ ಬ್ಯಾಂಕ್ ಆಫ್ ಇಂಡಿಯಾ, ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಿಂದ ಗ್ರಾಮೀಣ ಭಾಗದ ಆಸಕ್ತರಿಗೆ 30 ದಿನಗಳ ಉಚಿತ ಮೊಬೈಲ್ ರಿಪೇರಿ ಮತ್ತು ಕಂಪ್ಯೂಟರ್ ಅಕೌಂಟಿಂಗ್(ಟ್ಯಾಲಿ) ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.


ಮೊಬೈಲ್ ರಿಪೇರಿ ತರಬೇತಿಗೆ ಆ.7ರಂದು ಸಂದರ್ಶನವಿದ್ದು, ಆ.8ರಿಂದ ತರಬೇತಿ ಆರಂಭವಾಗಲಿದೆ. ಆ.14ರಂದು ಕಂಪ್ಯೂಟರ್ ತರಬೇತಿಗೆ ಸಂದರ್ಶನವಿದ್ದು, ಆ.15ರಿಂದ ತರಬೇತಿ ಆರಂಭವಾಗಲಿದೆ. ನಿರ್ದೇಶಕರು, ಸ್ಟೇಟ ಬ್ಯಾಂಕ್ ಆಫ್ ಇಂಡಿಯಾ, ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ, ಜಿಲ್ಲಾ ಕೈಗಾರಿಕಾ ಕೇಂದ್ರ ಆವರಣ, ಅಶೋಕ ಸರ್ಕಲ್ ಹತ್ತಿರ, ಕೊಪ್ಪಳ ಇಲ್ಲಿ ಅರ್ಜಿ ಪಡೆದು ಸಲ್ಲಿಸಬೇಕು. ಮಾಹಿತಿಗೆ ದೂ.ಸಂ: 08539-231038 ಸಂಪರ್ಕಿಸಲು ಸಂಸ್ಥೆ ನಿರ್ದೇಶಕರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net