ಮೊಬೈಲ್ ಮೂಲಕ ಕಂದಾಯ ಪಾವತಿಸಿ

HLK DAALI 13
Published on

ಹೊಳಲ್ಕೆರೆ: ತೆರಿಗೆ, ಕಂದಾಯವನ್ನು ಮೊಬೈಲ್ ಮೂಲಕವೇ ಪುರಸಭೆಗೆ ಪಾವತಿಸಬಹುದು. ಈ ಸೌಲಭ್ಯವನ್ನು ಜನರು ಸದ್ಬಳಕೆ ಮಾಡಿಕೊಂಡು, ಪುರಸಭೆ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಮುಖ್ಯಾಧಿಕಾರಿ ಎ.ವಾಸಿಂ ತಿಳಿಸಿದರು.

ಪಟ್ಟಣದಲ್ಲಿ ಕಂದಾಯ ಪಾವತಿಸದ ಅಂಗಡಿ-ಮುಂಗಟ್ಟು, ಮನೆಗಳಿಗೆ ಪುರಸಭೆ ಅಧಿಕಾರಿಗಳು ಗುರುವಾರ ಭೇಟಿ ನೀಡಿ ಕಂದಾಯ ವಸೂಲಿ ಮಾಡುವ ಮೂಲಕ ವಿಶೇಷ ವಸೂಲಾತಿ ಆಂದೋಲನ ವೇಳೆ ಮಾತನಾಡಿದರು.

ಕಚೇರಿಯಲ್ಲಿ ಫೋನ್, ಗೂಗಲ್ ಪೇ, ಪೇಟಿಎಂ ಇತ್ಯಾದಿ ಮೂಲಕ ಮೊಬೈಲ್‌ನಲ್ಲಿಯೇ ಹಣ ಪಾವತಿಸಬಹುದು ಎಂದರು.

ಪಟ್ಟಣದ ನಿವಾಸಿಗಳ ಮನೆ ಹಾಗೂ ಅಂಗಡಿಗಳ ಮಾಲೀಕರಿಗೆ ಕಂದಾಯ ಪಾವತಿಸುವಂತೆ ಸೂಚಿಸಲಾಗುತ್ತಿದೆ. ತಮ್ಮ ಸ್ವತ್ತಿನ ಆಸ್ತಿ ತೆರಿಗೆ (ಎಸ್‌ಎಎಸ್), ನೀರಿನ ಕಂದಾಯ, ಮಳಿಗೆ ಬಾಡಿಗೆ, ಜಾಹಿರಾತು ಶುಲ್ಕ, ಉದ್ದಿಮೆ ಪರವಾನಗಿ ಮತ್ತು ಇತರ ವಿವಿಧ ಬಾಕಿ ಕಂದಾಯ, ತೆರಿಗೆಯನ್ನು ಕೇಳಲಾಗುತ್ತಿದೆ ಎಂದು ತಿಳಿಸಿದರು.

ಪಟ್ಟಣದಲ್ಲಿ ದಿನನಿತ್ಯ ನಡೆಯುವ ಸ್ವಚ್ಛತೆ, ಬೀದಿದೀಪ ನಿರ್ವಹಣೆ, ನೀರು ಸರಬರಾಜು, ರಸ್ತೆ ಮತ್ತು ಚರಂಡಿ ಅಭಿವೃದ್ಧಿ, ನಿರ್ಮಾಣ ಕಾಮಗಾರಿಗಳು, ಉದ್ಯಾನವನ ಅಭಿವೃದ್ಧಿ ಕಾಮಗಾರಿಗಳು ಹಾಗೂ ಇನ್ನಿತರ ುೂಲ ಸೌಕರ್ಯ ನಿರ್ವಹಿಸಲು ಹಾಗೂ ಸಕಾಲದಲ್ಲಿ ಸವಲತ್ತುಗಳನ್ನು ಒದಗಿಸಲು ಕಂದಾಯ, ತೆರಿಗೆ ಹಣವೇ ಆಧಾರ ಎಂದು ತಿಳಿಸಿದರು.

ಕಂದಾಯ ಅಧಿಕಾರಿ ನೀಲಕಂಠಾಚಾರ್, ಕಂದಾಯ ನಿರೀಕ್ಷಕ ಡಿ.ನೌಷಾದ್, ನಾಗಭೂಷಣ್, ವಿಜಯಕುಮಾರ್, ಸಾಕಮ್ಮ, ಕಿಶೋರ್, ಹನುಮಂತಪ್ಪ, ಶಿವಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net